ಉಜಿರೆ: ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಕೆ ಬಯಲಾಟ ಪ್ರದರ್ಶನ ತಿರುಗಾಟ ಶನಿವಾರ ಚಾಲನೆ ನೀಡಲಾಯಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಕುಮಾರ್ ಉಪಸ್ಥಿತರಿದ್ದರು.

ಈಗಾಗಲೇ ಕೆಲವು ದಿನಗಳಲ್ಲಿ ಧರ್ಮಸ್ಥಳದಲ್ಲಿ ಸೇವಾಕರ್ತರ ವತಿಯಿಂದ ಹರಕೆ ಬಯಲಾಟ ಪ್ರದರ್ಶನಗೊಂಡಿದ್ದು, ಮುಂದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿ ದಿನ ಸಂಜೆ 7ರಿಂದ ರಾತ್ರಿ 12ರ ವರೆಗೆ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.

2023ರ ಮೇ 23ರ ವರೆಗೆ ಬಯಲಾಟ ಪ್ರದರ್ಶನದ ಬಳಿಕ ಮೂರು ದಿನ ಧರ್ಮಸ್ಥಳದಲ್ಲಿ ಸೇವಾ ಬಯಲಾಟ ಪ್ರದರ್ಶನದೊಂದಿಗೆ ಬಯಲಾಟ ಪ್ರದರ್ಶನ ಮುಕ್ತಾಯಗೊಳ್ಳುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂದೇಶವನ್ನು ನೀಡುವ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಬಯಲಾಟದಲ್ಲಿ ಪ್ರದರ್ಶನ ನೀಡುವುದು ಮೇಳದ ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.