ಸಾಸ್ವೆಹಳ್ಳಿ: ಬೆಳಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಇಲ್ಲಿನ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕಚೇರಿಯ ಬಾಗಿಲು ತೆರೆಯದ್ದಕ್ಕೆ ಗುರುವಾರ ರೈತರ ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದ ರೈತರು ಹಲವು ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು, ಕೃಷಿ ಪರಿಕರಗಳನ್ನು ಪಡೆಯಲು, ಬೆಳಿಗ್ಗೆಯೇ ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ರೈತ ಸಂಪರ್ಕ ಕೇಂದ್ರಕ್ಕೆ ಬಂದಿರುತ್ತಾರೆ. ಆದರೆ ಕಚೇರಿಯ ಬಾಗಿಲು ಮಾತ್ರ ಬೀಗ ಹಾಕಿರುತ್ತದೆ ಎಂದು ಸುದೀಪ್ ಗೌಡ ಬೇಸರ ವ್ಯಕ್ತಪಡಿಸಿದರು.

ಗುರುವಾರ ಮಕ್ಕಳ ದಿನಾಚರಣೆ ಇರುವುದರಿಂದ ಕಚೇರಿಗೆ ರಜೆ ನೀಡಿರುವ ಸಾಧ್ಯತೆಯಿಂದ ಹಲವು ರೈತರು ವಾಪಸ್ ತೆರಳಿದರು. ಸರಿಯಾದ ಸಮಯಕ್ಕೆ ಬಾಗಿಲು ತೆರೆಯದ ರೈತ ಸಂಪರ್ಕ ಏಕೆ ಬೇಕು? ಎಂದು ರಾಂಪುರದ ಭಾಷಾ ಸಾಹೇಬ್ ಪ್ರಶ್ನಿಸಿದರು.

ರೈತರಾದ ಶಿವರೆಡ್ಡಿ ಅಪಾರ ಕ್ಯಾಂಪ್, ಮಂಜಪ್ಪ ಬೆನಕನಹಳ್ಳಿ, ಹನುಮಂತಪ್ಪ ಬೆನಕನಹಳ್ಳಿ, ಹುರಳಹಳ್ಳಿ ಶಾಂತ, ಸಾಸ್ವೆಹಳ್ಳಿ ಆಕಾಶ್ ಸುತ್ತಮುತ್ತಲ ಗ್ರಾಮದ ರೈತರು ಇದ್ದರು.

ಸಿಬ್ಬಂದಿ ಕೊರತೆ ಇದೆ. ನಾನು ರೈತರ ಹೊಲಗಳಿಗೆ ಭೇಟಿ ನೀಡಿದ್ದೇನೆ. ಇರುವ ಒಬ್ಬ ಸಿಬ್ಬಂದಿ ಕೃಷಿ ಪರಿಕರ ತರಲು ಹೊನ್ನಾಳಿಗೆ ಹೋಗಿದ್ದಾರೆ. ಹಾಗಾಗಿ ಬಾಗಿಲು ತೆಗೆಯುವುದು ತಡವಾಗಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ
ಶಶಿಧರ್ ಸಾಸ್ವೆಹಳ್ಳಿ ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.