ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ನೂತನ ಕುಲಪತಿ ಆಯ್ಕೆಗಾಗಿ ಶೋಧನಾ ಸಮಿತಿಯು ಸೂಟ್ಕೇಸ್, ಲೆದರ್ ಬ್ಯಾಗ್, ಲೇಖನ ಸಾಮಗ್ರಿಗಳನ್ನು ಖರೀದಿಸಲು ಒಟ್ಟು ₹ 2.91 ಲಕ್ಷ ದುಂದು ವೆಚ್ಚ ಮಾಡಿರುವುದಕ್ಕೆ ಸಿಂಡಿಕೇಟ್ ಉಪಸಮಿತಿ ಆಕ್ಷೇಪಿಸಿದೆ.

ಶೋಧನಾ ಸಮಿತಿ ದುಂದುವೆಚ್ಚ ಮಾಡಿರುವ ಬಗ್ಗೆ ಸಿಂಡಿಕೇಟ್ ಉಪ ಸಮಿತಿ ಆಕ್ಷೇಪಿಸಿರುವ ವಿಷಯದ ಮೇಲೆ ವಿಶ್ವವಿದ್ಯಾಲಯದಲ್ಲಿ ಸೋಮವಾರ (ನ. 14) ನಡೆದ ಸಿಂಡಿಕೇಟ್ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಶೋಧನಾ ಸಮಿತಿಯ ಖರ್ಚು–ವೆಚ್ಚಗಳನ್ನು ಪರಿಶೀಲಿಸಲು ಸಿಂಡಿಕೇಟ್ ಸದಸ್ಯರಾದ ಡಾ.ಶ್ರೀಧರ್ ಎಸ್. ಅಧ್ಯಕ್ಷತೆಯಲ್ಲಿ ನೇಮಿಸಿದ್ದ ಸಿಂಡಿಕೇಟ್ ಉಪ ಸಮಿತಿಯು ಲೇಖನ ಸಾಮಗ್ರಿಗಳ ಖರೀದಿಗೆ ₹ 92,285, ಲೆದರ್ ಬ್ಯಾಗ್ ಖರೀದಿಗಾಗಿ ₹ 99,946 ಹಾಗೂ 10 ಸೂಟ್ಕೇಸ್ಗಳ ಖರೀದಿಗಾಗಿ ₹ 99,120 ಸೇರಿ ಒಟ್ಟು 2,91,351 ವೆಚ್ಚ ಮಾಡಿರುವುದನ್ನು ಆಕ್ಷೇಪಿಸಿತ್ತು.

‘10 ಸೂಟ್ಕೇಸ್ಗಳನ್ನು ಯಾರಿ ಗಾಗಿ ಹಾಗೂ ಯಾವ ಉದ್ದೇಶಕ್ಕೆ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ’ ಎಂದು ಸೆಪ್ಟೆಂಬರ್ 7ರಂದು ನಡೆದ ಸಿಂಡಿಕೇಟ್ ಉಪಸಮಿತಿಯ ಸಭೆಯ ನಡಾವಳಿಯಲ್ಲಿ ದಾಖಲಾಗಿತ್ತು. ಶೋಧನಾ ಸಮಿತಿಯ ಸದಸ್ಯರಿಗೆ ನಿಮಯ ಮೀರಿ ‘ಬಿಸಿನೆಸ್ ಕ್ಲಾಸ್’ನಲ್ಲಿ ವಿಮಾನಯಾನ ಮಾಡಲು ಹಣ ಪಾವತಿಸಿರುವ ಬಗ್ಗೆ ಹಾಗೂ ಊಟಕ್ಕೆ ₹70,000 ವೆಚ್ಚ ಮಾಡಿರುವ ಬಗ್ಗೆಯೂ ಉಪಸಮಿತಿ ಆಕ್ಷೇಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.