ದಾವಣಗೆರೆ: ಅಂಗವೈಕಲ್ಯ ಸಾಧನೆಗೆ ತೊಡಕಾಗಬಾರದು. ಅದನ್ನು ಮೆಟ್ಟಿನಿಂತು ಬೆಳೆಯಬೇಕು. ಗುರಿ ಅಷ್ಟೇ ನಿಮಗೆ ಕಾಣಬೇಕು. ಗುರಿಯ ಕಡೆಗೆ ಆಂತರಿಕ ತುಡಿತವಿದ್ದರೆ ಪ್ರಪಂಚದ ಅತ್ಯದ್ಭುತ ವ್ಯಕ್ತಿಯಾಗಬಹುದು ಎಂದುಡಿವೈಎಸ್ಪಿ ಪ್ರಕಾಶ್ ಅಂಗವಿಕಲ ಮಕ್ಕಳಿಗೆ ಕಿವಿಮಾತು ಹೇಳಿದರು.

ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ, ಸವಿನೆನಪಿಗಾಗಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹರ್ಷ ಬಿ. ಅವರ ‘ಎಎಂ ಟು ಪಿಎಂ ಡ್ಯಾನ್ಸ್ ಟ್ರೂಪ್’ ವತಿಯಿಂದ ನಗರದ ಕುವೆಂಪು ಕನ್ನಡಭವನದಲ್ಲಿ ಆಯೋಜಿಸಿದ್ದ ಅಂಗವಿಕಲರ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಟ ಪುನೀತ್ ನಮ್ಮ ಮನಸ್ಸಿನಾಳದಲ್ಲಿ ಚಿರವಾಗಿದ್ದಾರೆ. ಅವರ ಮಾತು, ಸರಳತೆ ನಮಗೆ ಆದರ್ಶ. ನಾವು ಮಾಡುವ ಪರೋಪಕಾರದಲ್ಲಿ ಅಪ್ಪು ಇರುತ್ತಾರೆ. ಅವರನ್ನು ಸ್ಮರಿಸಿಕೊಂಡು ಸಾಕಷ್ಟು ಜನರು ಬದಲಾವಣೆಯಾಗಿದ್ದಾರೆ. ಮಾನವೀಯತೆ ಸಂಸ್ಕೃತಿಯ ತಳಹದಿ ಅಪ್ಪು ಎಂದರೆ ಅತಿಶಯೋಕ್ತಿ ಅಲ್ಲ’ ಎಂದು ಶ್ಲಾಘಿಸಿದರು.

ಯೋಗ ಮತ್ತು ನೃತ್ಯದಿಂದ ದಿನಚರಿ ಆರಂಭಿಸುವುದರಿಂದ ದಿನಪೂರ್ತಿ ಲವಲವಿಕೆಯಿಂದ ಕಳೆಯಬಹುದಲ್ಲದೇ ಸದೃಢ ಆರೋಗ್ಯವನ್ನು ಹೊಂದಬಹುದು ಎಂದು ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ತಿಳಿಸಿದರು.

ಟಾರ್ಗೆಟ್ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕರಾದ ಮಂಜನಾಯ್ಕ್, ಚಿದಾನಂದ, ಜೂನಿಯರ್ ಅಪ್ಪು ಎಚ್.ಪಿ. ಬಸವರಾಜು, ಸುನಂದ, ಶಶಿಕುಮಾರ, ವೆಂಕಟೇಶ ಕುಮಾರ್, ಚಂದ್ರಶೇಖರ ಇದ್ದರು. ತೀರ್ಪುಗಾರರಾಗಿ ಪಲ್ಟಿ ರವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.