ಸಂತೇಬೆನ್ನೂರು ಬಳಿ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗಾಗಿ ಭೂಮಿ ಉಳುಮೆ ಮಾಡಿರುವುದು
ಸಂತೇಬೆನ್ನೂರಿನಲ್ಲೇ ಅತಿಹೆಚ್ಚು ಬೆಳೆ
ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಹರಪನಹಳ್ಳಿ ಜಗಳೂರು ಸೇರಿದಂತೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಾಪ್‌ಕಾರ್ನ್ ಬೆಳೆಯಲಾಗುತ್ತದೆ. ಈ ಪೈಕಿ ಅರ್ಧಪಾಲು ಬೆಳೆ ಸಂತೇಬೆನ್ನೂರು ವ್ಯಾಪ್ತಿಯಲ್ಲಿಯೇ ಇದೆ ಎಂಬುದು ವಿಶೇಷ. ಪ್ರಮುಖ ಖರೀದಿದಾರರು ಇಲ್ಲಿದ್ದಾರೆ.
‘ಬೀಜೋಪಚಾರ ಮುಖ್ಯ’
ಸಂಸ್ಕರಿಸಿದ ಬೀಜ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗ ರೈತರೇ ಪಾಪ್‌ಕಾರ್ನ್ ಮೆಕ್ಕೆಜೋಳ ಬೀಜ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಬೀಜದ ಹುಡುಕಾಟದಲ್ಲಿ ತೊಡಗಿದ್ದಾರೆ. ಪ್ರತಿ ಎಕರೆಗೆ 8 ಕೆ.ಜಿ. ಬಿತ್ತನೆ ಬೀಜದ ಅವಶ್ಯಕತೆ ಇದೆ. ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಅಗತ್ಯ. ಸಿಯಾಂಟ್ರನಿಲಿಪ್ರೊಲ್ 19.8% + ಥಿಯಾಮೆಥೊಕ್ಸಾಮ್ 19.8% FS ಔಷಧಿಯನ್ನು ಪ್ರತಿ ಕೆ.ಜಿ. ಬೀಜಕ್ಕೆ 6 ಎಂ.ಎಲ್ ಸೇರಿಸಿ ಬೀಜೋಪಚಾರ ಮಾಡಬೇಕು. ಸ್ಥಳೀಯವಾಗಿ ಇದು ಸಿಗದಿದ್ದಲ್ಲಿ ಕ್ಲೊರೋಫೆರಿಫಾಸ್ 20ec ಪ್ರತಿ ಕೆ.ಜಿ. ಬೀಜಕ್ಕೆ 3 ಎಂ.ಎಲ್ ಬೆರೆಸಿ ಉಪಚರಿಸಬೇಕು. ‘ಬೀಜೋಪಚಾರದಿಂದ ವಿವಿಧ ಬಗೆಯ ರೋಗ ನಿಯಂತ್ರಣ ಸಾಧ್ಯ. ಸೈನಿಕ ಹುಳು ಕಾಟವನ್ನು ತಡೆಯುವ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಾಲುಗಳಲ್ಲಿ ಎಡೆಹೊಡೆದು ದಿಂಡೇರಿಸುವುದು ಅತಿ ಮುಖ್ಯ’ ಎಂದು ಕೃಷಿ ಅಧಿಕಾರಿ ಮೆಹತಾಬ್ ಅಲಿ ಸಲಹೆ ನೀಡಿದ್ದಾರೆ.