ಡಿ.ಕೆ. ಬಸವರಾಜು

ದಾವಣಗೆರೆ: ನಗರದ ಪ್ರಥಮ ದರ್ಜೆ ಕಾಲೇಜಿಗೆ 2023–24ನೇ ಸಾಲಿನಲ್ಲಿ 5 ಹೊಸ ಕೋರ್ಸ್ಗಳಿಗೆ ಅನುಮೋದನೆ ಸಿಕ್ಕಿದೆ.

ಬಿ.ಎಸ್ಸಿಯಲ್ಲಿ ಪರಿಸರ ವಿಜ್ಞಾನ, ನ್ಯಾನೋ ಸೈನ್ಸ್, ಬಿ.ಎ.ನಲ್ಲಿ ದೈಹಿಕ ಶಿಕ್ಷಣ, ಬಿ.ಕಾಂ.ನಲ್ಲಿ ಉದ್ಯಮಶೀಲತೆ ಹಾಗೂ ಬಿ.ಬಿ.ಎ.ನಲ್ಲಿ ಪ್ರವಾಸೋದ್ಯಮ ನಿರ್ವಹಣೆ ಕೋರ್ಸ್ಗಳಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದೆ.

ಜುಲೈ 11ರಂದು ಇಲಾಖೆಯಿಂದ ಅನುಮತಿ ಸಿಕ್ಕಿದೆ. 2023–24ನೇ ಸಾಲಿಗೆ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜಿನ ಅಭಿಪ್ರಾಯ ಕೇಳಿತ್ತು. ಈ ನಿಟ್ಟಿನಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರ ಜೊತೆ ಚರ್ಚಿಸಿ ಅವರ ಸಲಹೆಯ ಮೇರೆಗೆ ಈ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಕಾಲೇಜಿನ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್. ಅಂಜನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಮಶೀಲತಾ ಕೋರ್ಸ್ಗಳಿಗೆ 60, ಉಳಿದ ಕೋರ್ಸ್ಗಳಿಗೆ 25 ಸೀಟುಗಳು ಲಭ್ಯವಿವೆ. ಒಟ್ಟು 160 ಸೀಟುಗಳಿಗೆ ಅನುಮತಿ ಸಿಕ್ಕಿದೆ. ಕಾಲೇಜಿನಲ್ಲಿ ಸೇರ್ಪಡೆಯಾಗದಿರುವ ಕೋರ್ಸ್ಗಳಿಗೆ ದಾಖಲಾತಿ ಕಡಿಮೆ ಮಾಡಿ ಈ ಕೋರ್ಸ್ಗಳಿಗೆ ಅನುಮತಿ ಕೇಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪದವಿ ಕೋರ್ಸ್ಗಳ ಪ್ರವೇಶಕ್ಕೆ ಜುಲೈ 15ಕ್ಕೆ ಕಡೆಯ ದಿನಾಂಕವಾಗಿತ್ತು. ವಿಶ್ವವಿದ್ಯಾಲಯ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸುವಂತೆ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಲಾಗುವುದು.
ಡಾ. ಎಸ್.ಆರ್. ಅಂಜನಪ್ಪ, ಪ್ರಾಂಶುಪಾಲ, ಸರ್ಕಾರಿ ಪದವಿಪೂರ್ವ ಕಾಲೇಜು

‘ಉದ್ಯಮಶೀಲತಾ ಕೋರ್ಸ್ ಕಲಿಯುವುದರಿಂದ ವಿದ್ಯಾರ್ಥಿಗಳು ಹೊಸ ಉದ್ಯಮವನ್ನು ಸ್ಥಾಪಿಸಿ ಸ್ವಾವಲಂಬಿಗಳಾಗಬಹುದು. ನ್ಯಾನೋ ಸೈನ್ಸ್ ಸಂಶೋಧನೆಗೆ ಅನುಕೂಲವಾಗುತ್ತದೆ. ಪರಿಸರ ವಿಜ್ಞಾನಕ್ಕೆ ಇಂದಿನ ದಿನಗಳಲ್ಲಿ ಹೆಚ್ಚು ಸ್ಕೋಪ್ ಇದೆ. ಇದೊಂದು ಹೊಸ ಪ್ರಯೋಗವಾಗಿದ್ದು, ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೋಡಬೇಕಾಗುತ್ತದೆ’ ಎಂದು ಹೇಳಿದರು.

‘ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಕೋರ್ಸ್ಗಳಿಗೂ ಪ್ರವೇಶಾತಿ ಮುಗಿದಿದೆ. ವಿಶ್ವವಿದ್ಯಾಲಯದ ಪ್ರಕಾರ ಜುಲೈ 15ಕ್ಕೆ ಕಡೆಯ ದಿನಾಂಕವಿತ್ತು. ಪ್ರವೇಶಾತಿಗೆ ಕಡೆಯ ದಿನಾಂಕವನ್ನು ಮುಂದೂಡುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಬೇಕು ಎಂದು ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

‘ಉದ್ಯಮಶೀಲತಾ ಕೋರ್ಸ್ ಅನ್ನು ಬಿ.ಕಾಂ. ಉಪನ್ಯಾಸಕರೇ ಬೋಧಿಸಲಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಈವರೆಗೆ ಪ್ರಾಯೋಗಿಕವಾಗಿ ಪಾಠ ಬೋಧಿಸುತ್ತಿದ್ದರು. ಇನ್ನು ಮುಂದೆ ಥಿಯರಿಯನ್ನೂ ಬೋಧಿಸುತ್ತಾರೆ. ಪ್ರವಾಸೋದ್ಯಮ ನಿರ್ವಹಣೆ ಕೋರ್ಸ್ ಅನ್ನು ಬೋಧಿಸಲು ಶಿಕ್ಷಕರು ಇದ್ದಾರೆ. ಕೊರತೆ ಕಂಡರೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ದಾವಣಗೆರೆ ವಿಶ್ವವಿದ್ಯಾಲಯದಲ್ಲಿ 2,4 ಹಾಗೂ 6ನೇ ಸೆಮಿಸ್ಟರ್ಗಳಿಗೆ ಜುಲೈ 10ರಿಂದ ಆಗಸ್ಟ್ 10ರವರೆಗೂ ಪರೀಕ್ಷೆ ನಡೆಯಲಿದ್ದು, ಇದರ ಜೊತೆಗೆ ಮೊದಲ ಸೆಮಿಸ್ಟರ್ಗಳಿಗೆ ಪ್ರವೇಶ ನಡೆಯುತ್ತಿದೆ. ಕಾಲೇಜು ಪುನಾರರಂಭಕ್ಕೆ ಕಾಲವಕಾಶ ನೀಡಿದ್ದು, ಅಷ್ಟರಲ್ಲಿ ಹೊಸ ಕೋರ್ಸ್ಗಳ ಪ್ರವೇಶ ನಡೆಯುತ್ತದೆ’ ಎಂದು ಹೇಳಿದರು.

‘ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಬಿಸಿಎ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ಗೆ ಅನುಮೋದನೆ ಸಿಕ್ಕಿದ್ದು, 40 ಸೀಟುಗಳು ಲಭ್ಯವಿವೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ತಿಳಿಸಿದರು.

ಮಾಹಿತಿಗೆ 9945973222 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಬಿಸಿಎಗೆ ಅನುಮೋದನೆ

ಹರಿಹರ ಪ್ರಥಮ ದರ್ಜೆ ಕಾಲೇಜಿಗೆ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ಗೆ ಅನುಮೋದನೆ ಸಿಕ್ಕಿದ್ದು 60 ಸೀಟುಗಳು ಲಭ್ಯತೆ ಇದ್ದು ಪಿಯುಸಿಯಲ್ಲಿ ವಿಜ್ಞಾನ ಅಥವಾ ವಾಣಿಜ್ಯ ವಿಷಯದಲ್ಲಿ ತೇರ್ಗಡೆಯಾಗಿರುವವರು ಪ್ರವೇಶಾತಿ ಪಡೆಯಬಹುದು. ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಎಚ್.ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.