ಹರಿಹರ: ಅಕ್ಕ ಪಕ್ಕದ ನಗರ, ಪಟ್ಟಣಗಳಲ್ಲಿ ವಿವಾದದ ಬಿಸಿ ಏರುತ್ತಿದ್ದಂತೆ ಗುರುವಾರ ನಗರದಲ್ಲಿಯ ಅನಧಿಕೃತ ಫ್ಲೆಕ್ಸ್ ಬೋರ್ಡ್ ತೆರವು ಕಾರ್ಯಚರಣೆಗೆ ನಗರಸಭೆ ಹಾಗೂ ಪೊಲೀಸ್ ಇಲಾಖೆ
ಮುಂದಾದವು.

ಪೊಲೀಸ್ ಸಿಬ್ಬಂದಿ ಉಪಸ್ಥಿತಿಯಲ್ಲಿ ನಗರಸಭೆ ಸಿಬ್ಬಂದಿ ಸಂಜೆಯಿಂದ ಅನಧಿಕೃತ ಫ್ಲೆಕ್ಸ್ ಬೋರ್ಡ್ಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಸಿದರು. ಮುಖ್ಯ ರಸ್ತೆ ಹಾಗೂ ಗಾಂಧಿ ವೃತ್ತದಲ್ಲಿಯ 10ಕ್ಕೂ ಹೆಚ್ಚು ಬೋರ್ಡ್ಗಳನ್ನು ತೆರವುಗೊಳಿಸಲಾಯಿತು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮುಂಬರುವ ವಿಧಾನಸಭಾ ಚುನಾವಣಾ ಟಿಕೆಟ್ ಅಕಾಂಕ್ಷಿಗಳು ಒಂದು ವಾರದಿಂದಲೇ ಗಣೇಶ ಹಬ್ಬದ ಶುಭಾಶಯ ಸಾರುವ ಬೋರ್ಡ್ಗಳನ್ನು ಕಂಡಕಂಡಲ್ಲಿ ಅಳವಡಿಸಿದ್ದರು. ಇವುಗಳಲ್ಲಿ ಅನಧಿಕೃತವಾಗಿರುವುದನ್ನು ತೆರವು
ಗೊಳಿಸಲಾಯಿತು. ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಲಿದೆ ಎಂದು ನಗರಸಭೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಒಂದು ಫ್ಲೆಕ್ಸ್ ಬೋರ್ಡ್ ಅಳವಡಿಸಬೇಕೆಂದರೆ ನಗರಸಭೆಗೆ ಬೋರ್ಡ್ನಲ್ಲಿರುವ ಅಂಶ, ಚಿತ್ರಗಳನ್ನು (ಕಂಟೆಂಟ್) ತೋರಿಸಿ, ದಿನಕ್ಕಿಷ್ಟು ಎಂದು ಶುಲ್ಕ ಪಾವತಿಸಿ, ಯಾವ ಜಾಗದಲ್ಲಿ ಅಳವಡಿಸಲಾಗುತ್ತದೆ ಎಂಬುದರ ಕುರಿತು ಅರ್ಜಿ ನೀಡಬೇಕಿದೆ. ಆದರೆ ಈ ನಿಯಮಗಳನ್ನು ಪಾಲಿಸುವವರು ಬೆರಳೆಣಿಕೆಯಷ್ಟು ಮಾತ್ರ. ಎರಡು ಬೋರ್ಡ್ಗಳಿಗೆ ಅನುಮತಿ ಪಡೆದು ಆರು ಬೋರ್ಡ್ಗಳನ್ನು ಅಳವಡಿಸವವರೇ
ಹೆಚ್ಚಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.