ಚನ್ನಗಿರಿ: ಮಳೆಯ ಅಬ್ಬರ ಕಡಿಮೆ ಆಗುತ್ತಿದ್ದಂತೆಯೇ ತಾಲ್ಲೂಕಿನಾದ್ಯಂತ ಮೆಕ್ಕೆಜೋಳದ ಕೊಯ್ಲು ಕಾರ್ಯ ಭರದಿಂದ ಸಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಅಡಿಕೆ ಬೆಳೆ ಬಿಟ್ಟರೆ 2ನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಮೆಕ್ಕೆಜೋಳವನ್ನು ಬೆಳೆಯಲಾಗುತ್ತಿದ್ದು, ಈ ಬಾರಿ 23,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾದ ಕಾರಣ ಮೆಕ್ಕೆಜೋಳ ಇಳುವರಿಯೂ ಉತ್ತಮವಾಗಿದ್ದು, ಎಕರೆಗೆ 15ರಿಂದ 18 ಕ್ವಿಂಟಲ್ ದೊರೆಯುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ ಮಳೆ ಕೊರತೆ ಕಾರಣದಿಂದ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ಬಾರಿ ಅತಿವೃಷ್ಟಿಯಿಂದಾಗಿ 300 ಹೆಕ್ಟೇರ್ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆ ಹಾಳಾಗಿದೆ. ಉಳಿದಂತೆ ಎಲ್ಲ ಕಡೆಗಳಲ್ಲಿ ಮೆಕ್ಕೆಜೋಳದ ನಿರೀಕ್ಷಿತ ಇಳುವರಿ ಬಂದಿದೆ.

ತಾಲ್ಲೂಕಿನ ಸಂತೇಬೆನ್ನೂರಿನಲ್ಲಿ ಪಾಪ್ಕಾರ್ನ್ ಹೆಚ್ಚಾಗಿ ಬೆಳೆಯಲಾಗಿದೆ. ಕಸಬಾ, ಬಸವಾಪಟ್ಟಣ ಹಾಗೂ ತಾವರೆಕೆರೆ ಹೋಬಳಿಗಳಲ್ಲಿ ದೊಡ್ಡ ಮೆಕ್ಕೆಜೋಳವನ್ನೇ ಬೆಳೆಯಲಾಗುತ್ತದೆ.
ಪ್ರತಿ ಎಕರೆಗೆ 15ರಿಂದ 18 ಕ್ವಿಂಟಲ್ ಮೆಕ್ಕೆಜೋಳ ಇಳುವರಿ ದೊರೆತಿದ್ದು, ರೈತರು ಸಂತಸಗೊಂಡಿದ್ದಾರೆ. ಕೊಯ್ಲು ಭರದಿಂದ ನಡೆಯುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಅರುಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಮೆಕ್ಕೆಜೋಳದ ದರ ಪ್ರತಿ ಕ್ವಿಂಟಲ್ಗೆ ₹ 1,600ದಿಂದ ₹ 2,530ರವರೆಗೆ ಇದೆ. ಈ ಬಾರಿ 5 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದು 5 ಎಕರೆಗೆ 80 ಕ್ವಿಂಟಲ್ ಇಳುವರಿ ಬಂದಿದೆ. ₹ 2,050 ರಂತೆ ಮಾರಾಟ ಮಾಡಿದ್ದು, ಒಟ್ಟು ₹ 1.64 ಲಕ್ಷ ಆದಾಯ ಬಂದಿದೆ. ಖರ್ಚು ಕಳೆದು ₹ 1 ಲಕ್ಷ ಉಳಿತಾಯವಾಗಿದೆ’ ಎಂದು ರಾಮೇನಹಳ್ಳಿ ಗ್ರಾಮದ ರೈತ ನಾಗರಾಜ್ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.