ಜಗಳೂರು: ಕಮ್ಮವಾರಿ ಸಮುದಾಯಕ್ಕೆ ರಾಜಕೀಯ ಜನ್ಮ ನೀಡಿದ ಜಗಳೂರು ಪುಣ್ಯಭೂಮಿಯನ್ನು ಕಮ್ಮವಾರಿ ಸಮಾಜ ಸ್ಮರಿಸುತ್ತದೆ ಎಂದು ಚಿತ್ರದುರ್ಗ ನಗರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಪಟ್ಟಣದ ತರಳಬಾಳು ಭವನದಲ್ಲಿ ಈಚೆಗೆ ನಡೆದ ತಾಲ್ಲೂಕು ಕಮ್ಮಾವಾರಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1972 ರ ದಶಕದಲ್ಲಿ ನನ್ನ ಅಣ್ಣ ದಿವಂಗತ ಅಶ್ವತ್ಥರೆಡ್ಡಿ ಅವರು ಇಲ್ಲಿನ ಸಹೋದರ ಸಮಾಜಗಳ ಸಹಕಾರದಿಂದ 6 ಬಾರಿ ಶಾಸಕರು ಹಾಗೂ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಗೆ ಅವರ ಅವರ ಕೊಡುಗೆ ಅಪಾರವಾಗಿದೆ. ಕಮ್ಮಾವಾರಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಸರ್ಕಾರದಿಂದ ಯಾವುದೇ ನೆರವು ಬಯಸದೆ ದಾನಿಗಳ ನೆರವಿನಿಂದ ಅಸ್ತಿತ್ವಕ್ಕೆ ಬಂದಿದೆ ಎಂದರು.

‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪಿಯು ಹಾಗೂ ಪದವಿ ವ್ಯಾಸಂಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನಮ್ಮ ಸಮುದಾಯದ ಪ್ರತಿಭೆಗಳನ್ನ ಗುರುತಿಸಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗುವುದು’ ಎಂದು ಹೇಳಿದರು.

ಮಾಜಿ ಸಚಿವ ಅಶ್ವತ್ಥ ರೆಡ್ಡಿ ಅವರ ಪುತ್ರ ರಮೇಶ ರೆಡ್ಡಿ, ‘ನಮ್ಮ ಸಮುದಾಯ ಸಂಘಟನೆಯಾಗಿ ಒಗ್ಗಟ್ಟಿನಿಂದ ಕಾರ್ಯಕ್ರಮಗಳನ್ನು ಆಯೋಜಿಸಿ ಸಹೋದರ ಸಮಾಜಗಳ ಸಹಕಾರ ಪಡೆದು ಯಶಸ್ಸು ಗಳಿಸಿ ಮುನ್ನಡೆಯಬೇಕಿದೆ. ಎಲ್ಲರೂ ಬೇರೆ ಬೇರೆಕಡೆ ಸಮರ್ಥವಾಗಿ ತನ್ನದೇ ಆದ ವೃತ್ತಿ, ದುಡಿಮೆ ಮಾಡುವ ಶ್ರಮ ಜೀವಿಗಳು ಕಮ್ಮವಾರಿ ಸಮುದಾಯದವರು. ಆಂತರಿಕ ವೈಮನಸ್ಸನ್ನು ತೊರೆದು ಪ್ರತಿವರ್ಷವೂ ಸಾಮೂಹಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಮರಸ್ಯತೆ ಮೆರೆಯೋಣ’ ಎಂದು ಸಲಹೆ ನೀಡಿದರು.

ರಂಗನಾಥರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಎಂ.ಟಿ. ತಿಪ್ಪೇಸ್ವಾಮಿ, ಕೆ.ವಿ. ರಾಮಕೃಷ್ಣ ರೆಡ್ಡಿ, ರಂಗಾಪುರ ಹನುಮಂತ ರೆಡ್ಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು.

ಮುಖಂಡರಾದ ಯಾದವರೆಡ್ಡಿ, ಶ್ಯಾಮಪ್ರಸಾದ್ , ಡಾ.ವಿಜಯ ಲಕ್ಷ್ಮಿ,ವೇಣುಗೋಪಾಲರೆಡ್ಡಿ, ಎಸ್ ಕೆ.ರಾಮರೆಡ್ಡಿ, ಪ್ರಕಾಶ ರೆಡ್ಡಿ, ಮಿಲ್ಟ್ರಿ ತಿಪ್ಪೇಸ್ವಾಮಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಮಾಧವರೆಡ್ಡಿ, ಸತ್ಯನಾರಾಯಣ, ಮಂಜುನಾಥ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.