ದಾವಣಗೆರೆ: ‘ಎಲ್ಲರ ಮನೆಯಲ್ಲೂ ಮಹಿಳೆಯರು ಅಡುಗೆ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಅಡುಗೆಗೆ ಮಾತ್ರ ಲಾಯಕ್ಕು ಅಂದರೆ ಹೇಗೆ? ಅಡುಗೆ ಮಾಡದ ಹೆಂಡತಿಯರು ಯಾರಿದ್ದಾರೆ ಹೇಳಿ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿರುಗೇಟು ನೀಡಿದರು.

ನಗರದ ವಿವಿಧೆಡೆ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ ಪರ ಮತಯಾಚನೆ ಮಾಡುವ ವೇಳೆ ಅವರು ಮಾತನಾಡಿದರು.

‘ಮಹಿಳೆಯರು ರಾಕೆಟ್ ಉಡಾವಣೆಯನ್ನೂ ಮಾಡುತ್ತಾರೆ, ಪೈಲೆಟ್ ಆಗಿದ್ದಾರೆ. ಐಎಎಸ್, ಐಪಿಎಸ್ ಕೂಡ ಆಗ್ತಾರೆ. ನಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಮಹಿಳೆಯೇ. ಕೆಲವರು ಮಾತ್ರ ಹೋಟೆಲ್‌ನಲ್ಲಿ ತರಿಸಿಕೊಂಡು ತಿನ್ನುತ್ತಾರೆ. ಈ ಹೇಳಿಕೆಗೆ ದೇಶದಾದ್ಯಂತ ಈ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ’ ಎಂದರು.

ಮಾಜಿ ಸಚಿವ ಮರುಗೇಶ ನಿರಾಣಿ, ಧೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೇವರಮನೆ ಶಿವಕುಮಾರ್, ಮುಖಂಡರಾದ ಜಯಪ್ರಕಾಶ್ ಕೊಂಡಜ್ಜಿ, ಮುರುಗೇಶ್ ಆರಾಧ್ಯ, ಕೊಳೆನಹಳ್ಳಿ ಸತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.