ನ್ಯಾಮತಿ (ದಾವಣಗೆರೆ ಜಿಲ್ಲೆ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿರುವ ಆರ್ಎಸ್ಎಸ್ ಸ್ವಯಂಸೇವಕರಿಗೆ ಪಟ್ಟಣದ ಮುಸ್ಲಿಂ ಸಮುದಾಯದ ಹಿರಿಯ ಮಹಮದ್ ಶಬೀರ್ ಮತ್ತು ಅವರ ಪುತ್ರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುಸ್ತಾಫೀಜ್ ಉಲ್ಲಾ ಅವರು ತಾಲ್ಲೂಕಿನಲ್ಲಿಯೇ ಮೊದಲಿಗರಾಗಿ ದೇಣಿಗೆ ಸಮರ್ಪಿಸಿದರು.

‘ಭಾರತ ಸರ್ವ ಧರ್ಮಗಳ ತೊಟ್ಟಿಲು. ಇಲ್ಲಿ ಎಲ್ಲರೂ ಸಹೋದರರಂತೆ ಬದುಕು ಕಟ್ಟಿಕೊಂಡು ಜೀವನ ನಡೆಸೋಣ’ ಎಂದು ಮಹಮದ್ ಶಬೀರ್ ಹೇಳಿದರು.

‘ಶ್ರೀರಾಮ ಭಾವೈಕ್ಯದ ಸಂಕೇತ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್ಲ ಧರ್ಮದವರೂ ದೇಣಿಗೆ ನೀಡುತ್ತಿದ್ದಾರೆ’ ಎಂದು ನ್ಯಾಮತಿ ತಾಲ್ಲೂಕು ಅಭಿಯಾನ ಪ್ರಮುಖ್ ವಾದಿರಾಜ್ ಕಮರೂರ್ ಹೇಳಿದರು.

ಆರ್ಎಸ್ಎಸ್ ಸ್ವಯಂ ಸೇವಕರಾದ ಶ್ರೀನಿವಾಸ ನಾಡಿಗ, ಮೆರವಣಿಗೆ ಜಯದೇವಪ್ಪ, ಕೆ.ವಿ. ಕಾರ್ತಿಕ, ಬಿಜೆಪಿ ಮುಖಂಡರಾದ ಜಿಲ್ಲಾ ಪಂಚಾಯಿತಿ ಸದಸ್ಯೆ ಉಮಾ ರಮೇಶ, ನ್ಯಾಮತಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಪಿ. ರವಿಕುಮಾರ, ಬಿ. ಜಯರಾಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.