ದಾವಣಗೆರೆ: ‘ರಾಮಮಂದಿರ ನಿರ್ಮಾಣ ಸಂಬಂಧ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ತೀರ್ಪು ಬರುವವರೆಗೂ ನಾವು ಕಾಯುವುದು ಅನಿವಾರ್ಯ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ್ದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ಅವಧಿ ಮುಗಿಯುತ್ತ ಬಂದರೂ ರಾಮಂದಿರ ಏಕೆ ನಿರ್ಮಾಣಗೊಂಡಿಲ್ಲ’ ಎಂಬ ಸುದ್ದಿರಾರರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.

‘ರಾಮಮಂದಿರ ನಿರ್ಮಿಸಬೇಕು ಎಂಬ ಉತ್ಸಾಹ ಎಲ್ಲರಲ್ಲೂ ಇದೆ. ಆದರೆ, ತೀರ್ಪು ಬರುವವರೆಗೂ ಕಾಯಬೇಕು ಎಂಬುದು ಕೆಲವರಿಗೆ ತಿಳಿದಿಲ್ಲ ಅಷ್ಟೇ’ ಎಂದರು.

ಗಂಗಾ ನದಿ ಶುದ್ಧಗೊಳಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದ್ದು, ಕಾಮಗಾರಿ ಶೀಘ್ರಗತಿಯಲ್ಲಿ ನಡೆಯಬೇಕು ಎಂದು ಹೇಳಿದರು.

‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಈ ವಿಷಯವನ್ನು ಬಂಡವಾಳ ಮಾಡಿಕೊಳ್ಳಲಿದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾವು ಬಿಜೆಪಿಯವರಲ್ಲ. ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ. ರಾಜಕೀಯ ಕಡೆಗೆ ಗಮನ ಕೊಡುವುದಿಲ್ಲ’ ಎಂದು ಉತ್ತರಿಸಿದರು.

ಮಂಗಳೂರಿನಲ್ಲಿ ಕೋಮು ಸೌಹಾರ್ದ ಕಾಪಾಡಲು ಹಿಂದೂ– ಮುಸ್ಲಿಮರು ಒಟ್ಟಿಗೆ ಸಾಗಬೇಕು. ಪರಸ್ಪರ ರಕ್ಷಣೆ ನೀಡುವ ಮನೋಭಾವ ಎರಡೂ ಸಮಾಜದವರಲ್ಲಿ ಬರಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಎಲ್ಲಾ ಪ್ರದೇಶಗಳಿಗೆ ಒತ್ತು ನೀಡುತ್ತಿಲ್ಲ ಎಂಬ ಕುರಿತು ಗಮನ ಸೆಳೆದಾಗ, ‘ಬೇರೆಯವರ ಬಗ್ಗೆ ನಾನು ಆರೋಪ ಮಾಡುವುದಿಲ್ಲ. ಶಾಸಕರು, ಸಚಿವರು ಇದ್ದಾರೆ. ಆ ಬಗ್ಗೆ ಅವರು ವಿಚಾರಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.