ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತ್ಯಾವಣಿಗೆ | ಭತ್ತದ ಸಸಿ ಮಡಿಗೆ ಸಿದ್ಧತೆ ಜೋರು

ಮಳೆ ಬರುವ ನಿರೀಕ್ಷೆಯಲ್ಲಿ ರೈತರು
Published 13 ಜುಲೈ 2024, 6:59 IST
Last Updated 13 ಜುಲೈ 2024, 6:59 IST
ಅಕ್ಷರ ಗಾತ್ರ

ತ್ಯಾವಣಿಗೆ: ಹೋಬಳಿಯಾದ್ಯಂತ ರೈತರು ಮಳೆ ಬರುವ ನಿರೀಕ್ಷೆಯೊಂದಿಗೆ ಭತ್ತದ ಸಸಿ ಮಡಿ ಮಾಡಲು ಸಿದ್ಧತೆ ಕೈಗೊಂಡಿದ್ದಾರೆ.

ಮಳೆ ಕೊರತೆ ನಡುವೆಯೂ ಕತ್ತಲಗೆರೆ, ಬೆಳಲಗೆರೆ, ಕಶೆಟ್ಟೆಹಳ್ಳಿ ಇತರೆ ಗ್ರಾಮಗಳ ರೈತರು ಆಶಾಭಾವ ಹೊಂದಿ ಭತ್ತದ ಸಸಿ ಮಡಿ ಮಾಡುವಲ್ಲಿ ನಿರತರಾಗಿದ್ದಾರೆ.

ಕಳೆದ ಬೇಸಿಗೆ ಹಂಗಾಮಿನಲ್ಲಿ ಡ್ಯಾಂನಿಂದ ಭತ್ತದ ಬೆಳೆಗೆ ನೀರು ಬಿಡದ ಕಾರಣ ಭತ್ತದ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಈಗಲೂ ಭದ್ರಾ ಡ್ಯಾಂನಲ್ಲಿ ನೀರು ಸಂಗ್ರಹಣೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಮಳೆ ಬರುವ ಮುನ್ಸೂಚನೆ ಇರುವುದರಿಂದ ಭತ್ತದ ಸಸಿ ಮಡಿ ಮಾಡುತ್ತಿದ್ದೇವೆ ಎಂದು ಬೆಳಲಗೆರೆ ಗ್ರಾಮದ ರೈತ ಮಹೇಶ್ ತಿಳಿಸಿದರು.

ಈ ಸಮಯದಲ್ಲಿ ಭತ್ತದ ಸಸಿ ಮಡಿ ಮಾಡಿದರೆ ಉತ್ತ ಫಸಲು ಪಡೆಯಬಹುದು ಎಂದು ಕಶೆಟ್ಟಿಹಳ್ಳಿ ರೈತ ರವಿ ತಿಳಿಸಿದರು.

ಮಳೆಯ ಬಗ್ಗೆ ಹವಮಾನ ತಜ್ಞರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ರೈತರು ಬೆಳೆಗಾಗಿ ಸಾಲ ಮಾಡಿರುತ್ತಾರೆ. ಹಾಕಿದ ಬಂಡವಾಳ ನಷ್ಟವಾಗದಿರಲಿ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಆಶಯ ವ್ಯಕ್ತಪಡಿಸಿದರು.

ರೈತ ಸಂಪರ್ಕ ಕೇಂದ್ರದಿಂದ ಕೆಲ ರೈತರು ಈಗಾಗಲೇ ಭತ್ತದ ಬೀಜ ಖರೀದಿಸಿದ್ದು, ಆಗಸ್ಟ್ ತಿಂಗಳ ಅಂತ್ಯದವರೆಗೆ ಭತ್ತ ನಾಟಿ ಮಾಡಬಹುದಾಗಿದೆ ಎಂದು ತ್ಯಾವಣಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಂಗಸ್ವಾಮಿ ಡಿ.ಎಂ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT