ಹುಬ್ಬಳ್ಳಿ: ನಗರದ ಭಾವದೀಪ ಶಿಕ್ಷಣ ಸಂಸ್ಥೆಯ ವಿಮಲಾಬಾಯಿ ಮೆಮೋರಿಯಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ನೇಹಾ ಎಲ್.ಆರ್ ಇತ್ತೀಚೆಗೆ ಜರುಗಿದ ‘ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ– 2021’ದಲ್ಲಿ ಮಂಡಿಸಿದ್ದ ‘ಬಟ್ಟೆ ಬ್ಯಾಗ್ ಬಳಸೋಣ-ಪ್ಲಾಸ್ಟಿಕ್ ಚೀಲ ತ್ಯಜಿಸೋಣ’ ಎಂಬ ಸಂಶೋಧನಾ ಪ್ರಬಂಧವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ವಿಜ್ಞಾನ ಶಿಕ್ಷಕಿ ಅಕ್ಷತಾ ಕುರ್ಡೇಕರ ಮಾರ್ಗದರ್ಶನ ನೀಡಿದ್ದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ರಾಜ್ಯ ವಿಜ್ಞಾನ ಪರಿಷತ್ತು ಇತ್ತೀಚೆಗೆ ಸಮಾವೇಶ ಹಮ್ಮಿಕೊಂಡಿತ್ತು.

‘ಸುಸ್ಥಿರ ಜೀವನಕ್ಕಾಗಿ ವಿಜ್ಞಾನ’ ಎಂಬ ವಿಷಯದಡಿ ನಡೆದಿದ್ದ ಆನ್‍ಲೈನ್ ಸಮಾವೇಶದಲ್ಲಿ ರಾಜ್ಯದ ಜಿಲ್ಲೆಗಳಿಂದ ಆಯ್ಕೆಯಾದ 300 ಯೋಜನೆಗಳಲ್ಲಿ 30 ಯೋಜನೆಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ನೇಹಾ ಪ್ರಬಂಧವೂ ಸೇರಿದೆ. ಇದಕ್ಕಾಗಿ ಮೂರು ತಿಂಗಳು ಅಧ್ಯಯನ ನಡೆಸಿದ್ದ ನೇಹಾ, 62 ಮನೆಗಳನ್ನು ಸಂದರ್ಶಿಸಿ ಕಸದ ನಿರ್ವಹಣೆ, ಪ್ಲಾಸ್ಟಿಕ್ ಕಸದ ಸಮಸ್ಯೆಗಳು, ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಟ್ಟೆ ಚೀಲಗಳ ಬಳಕೆ ಕುರಿತು ವರದಿ ತಯಾರಿಸಿದ್ದಳು.

ಕಳೆದ ವರ್ಷವೂ ನೇಹಾ ಮಂಡಿದ್ದ ‘ಕಷಾಯ ಕುಡಿಯೋಣ-ಕೊರೊನಾ ಓಡಿಸೋಣ’ ಪ್ರಬಂಧ ನಿರ್ಣಾಯಕರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಮಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.