ಅಣ್ಣಿಗೇರಿ: ಸ್ಥಳೀಯ ಪುರಸಭೆಗೆ ಸೋಮವಾರ ಶಾಂತಿಯುತವಾಗಿಮತದಾನ ನಡೆಯಿತು. 23 ವಾರ್ಡ್ಗಳ ಎಲ್ಲ 23 ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಬಿರುಸಿನ ಮತದಾನ ನಡೆಯಿತು. ಒಟ್ಟು 21,561 ಮತದಾರರಿದ್ದು ಅದರಲ್ಲಿ ಪುರುಷರು 10,677, ಮಹಿಳೆಯರು 10,822, ಇತರೆ 2 ಇದ್ದಾರೆ. 7,896 ಪುರುಷರು, 7531 ಮಹಿಳೆಯರು ಹಾಗೂ 2 ಇತರೆ ಮತಚಲಾಯಿಸಿದ್ದಾರೆ. ಒಟ್ಟು ಶೇ 72ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಅಮಾಸಿ ತಿಳಿಸಿದರು.

ಪ್ರತಿ ಮತದಾನ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಥರ್ಮೊಮೀಟರ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಇದುವರೆಗೆ ಕೋವಿಡ್ ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನಗರದ ಶಾಸಕರ ಮಾದರಿ ಕೇಂದ್ರ ನಂ. 1ರ ಮುಂಭಾಗದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಕೆಲಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು. ಪೊಲೀಸರು ಅವರನ್ನು ಕದಲಿಸಿ, ವಾತಾವರಣ ತಿಳಿಗೊಳಿಸಿದರು.

ಸ್ಥಳೀಯ ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿಡಿ.30 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.