ಅಖಿಲ ಭಾರತ ಕಬ್ಬು ಸಮನ್ವಯ ಯೋಜನೆ ಕೃಷಿ ಸಂಶೋಧನ ಕೇಂದ್ರ ಸಂಶೋಧಿಸಿದ ಹೊಸ ತಳಿಯ ಕಬ್ಬನ್ನು ರೈತರು ವೀಕ್ಷಿಸಿದರು
ಮಾಹಿತಿಗೆ ಕ್ಯುಆರ್ ಕೋಡ್
ಕೃಷಿ ಮೇಳಕ್ಕೆ ಬರುವ ರೈತರಿಗೆ ಕಬ್ಬಿನ ನೂತನ ಬೇಸಾಯ ತಾಂತ್ರಿಕತೆಗಳ ಬಗ್ಗೆ ಹಾಗೂ ಹೊಸ ತಳಿಗಳ ಬಗ್ಗೆ ತಿಳಿದುಕೊಳ್ಳಲು ಕ್ಯುಆರ್ ಕೋಡ್‍ಗಳು ಸಹಕಾರಿಯಾಗಿವೆ. ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ಮಳಿಗೆ ಬಳಿ ಕ್ಯುಆರ್ ಕೋಡ್ ಇಡಲಾಗಿದೆ. ಇದನ್ನು ಸ್ಕ್ಯಾನ್ ಮಾಡಿದದರೆ 14 ಪುಟಗಳ ಪಿಡಿಎಫ್ ಡೌನ್‌ಲೋಡ್ ಆಗುತ್ತದೆ. ಇದರಲ್ಲಿ ವಿವಿಧ ತಳಿಗಳ ರಕ್ಷಣೆ ನಿರ್ವಹಣೆ ಕುರಿತ ಮಾಹಿತಿ ಹಾಗೂ ಮತ್ತೊಂದರಲ್ಲಿ 5 ಪುಟಗಳ ವಿವಿಧ ಹೊಸ ತಳಿಗಳ ಬೀಜ ಹಂಚಿಕೆ ಕುರಿತ ಮಾಹಿತಿ ಲಭ್ಯವಿದೆ. ಒಂದೇ ಕಡೆ ಎಲ್ಲ ಮಾಹಿತಿ ಲಭ್ಯವಿದ್ದು ರೈತರಿಗೆ ಹೆಚ್ಚು ಉಪಯುಕ್ತವಾಗಿದೆ ಎನ್ನುತ್ತಾರೆ ಡಾ.ಬಿ.ಅರುಣಕುಮಾರ.