‘50 ಜನರಿರುವ ಕೃಷಿ ಕುಟುಂಬದಲ್ಲಿ 20 ಎಮ್ಮೆ 6 ಆಕಳು ಮತ್ತು 4 ಕರುಗಳಿವೆ. ಮನೆ ಬಳಕೆಯಾಗಿ ಉಳಿದ 10 ಲೀಟರ್ ಹಾಲನ್ನು ಡೇರಿಗೆ ಕೊಡುತ್ತೇವೆ. ನಮ್ಮದೇ 30 ಡೇರಿಗಳಿವೆ. ಈ ಮೂಲಕ ಹೈನುಗಾರಿಯಲ್ಲೂ ತೊಡಗಿಸಿಕೊಂಡಿದ್ದೇವೆ’ ಎಂದು ಫಕೀರಪ್ಪ ಮುರಾರಿ ಹೇಳಿದರು. ‘ಕೃಷಿಗೆ ಕುಟುಂಬದ ಸಹಕಾರ ತೀರ ಅವಶ್ಯ. ಮನೆಯವರೆಲ್ಲ ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದಲೇ ಆಳು ತೆಗೆದುಕೊಳ್ಳುವ ಪ್ರಮಾಣ ತೀರ ಕಡಿಮೆ. ಹಾಗಾಗಿ ಆಳಿನ ಖರ್ಚು ಉಳಿದಂತಾಗುತ್ತದೆ’ ಎಂದೂ ವಿವರಿಸಿದರು.