ಅಳ್ನಾವರ: ಕಲಘಟಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶನಿವಾರ ಸಮೀಪದ ರಾಮಾಪುರ, ವೀರಾಪುರ, ಕಲ್ಲಾಪುರ ಸೇರಿದಂತೆ ವಿವಿಧ
ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಹಿರಿಯರನ್ನು ಬೇಟ್ಟಿಯಾಗಿ ಮತಯಾಚನೆ ಮಾಡಿದ ಅವರು ಜನರು ನನ್ನ ಮೇಲಿಟ್ಟಿರುವ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡದೆ ಹಗಲಿರುಳು ಕ್ಷೇತ್ರದ ಅಭಿವೃದ್ಧಿ ದುಡಿಯುವದಾಗಿ ಭರವಸೆ ನೀಡಿದರು.

ಕ್ಷೇತ್ರದ ಜನರ ಸಮಸ್ಯೆಗಳನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ವ್ಯಕ್ತಿ ಶಾಸಕನಾದರೆ ಮಾತ್ರ ಸುಧಾರಣೆ ಕಾಣಲು ಸಾಧ್ಯವಿದೆ ಬಿಜೆಪಿ ಸರ್ಕಾರ ಸಾಕಷ್ಟು ಅನುಧಾನವನ್ನು ಕೊಟ್ಟಿದ್ದು ಅದು ಗೆಲುವಿಗೆ
ಸಹಕಾರಿಯಾಗಲಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮಾರ್ಗದರ್ಶನದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ನನಗೊಂದು ಅವಕಾಶ ನೀಡಿ ಆಶೀರ್ವಾದ ಮಾಡುವಂತೆ ಕೋರಿದರು.
ಅಳ್ನಾವರ ಮಂಡಲ ಅಧ್ಯಕ್ಷ ಕಲ್ಮೇಶ ಬೇಲೂರ, ಹಿರಿಯರಾದ ಶಶಿಧರ ಇನಾಮದಾರ, ಬೆಣಚಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸಂದೀಪ ಪಾಟೀಲ ಹಾಗೂ ಕಾರ್ಯಕರ್ತರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.