ನವಲಗುಂದ: ‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಆಗಿದ್ದರಿಂದ ಬೆಳೆಹಾನಿಯಾಗಿದೆ. ಎನ್ಡಿಆರ್ಎಫ್ ಅಥವಾ ಎಸ್ಟಿಆರ್ಎಫ್ ಮಾದರಿಯಲ್ಲಿ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ರಘುನಾಥ ನಡುವಿನಮನಿ ಅವರು ತಹಶೀಲ್ದಾರ್ ಕಚೇರಿ ಶಿರಸ್ತೇದಾರ ಕೃಷ್ಣ ಅರೇರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಸತತವಾಗಿ ಸುರಿದ ಮಳೆಯಿಂದ ಮುಂಗಾರಿನಲ್ಲಿ ಬೆಳೆದ ಹೆಸರು, ಉಳ್ಳಾಗಡ್ಡೆ, ಹತ್ತಿ, ಗೋವಿನಜೋಳ, ಮೆಣಸಿನಕಾಯಿ ಹಾಗೂ ತೋಟಗಾರಿಕೆ ಬೆಳೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ’ ಎಂದು ಅವರು ತಿಳಿಸಿದರು.

‘ಹಿಂದಿನ ಬರ ಪರಿಹಾರವು ಸರಿಯಾಗಿ ರೈತರಿಗೆ ತಲುಪಿಲ್ಲ. ರೈತರು ಶೋಚನೀಯ ಸ್ಥಿತಿಯಲ್ಲಿ ಇದ್ದಾರೆ. ಈಗಲಾದರೂ ಸಮರ್ಪಕ ಸಮೀಕ್ಷೆ ನಡೆಸಿ ತಿಂಗಳೊಳಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಎಂ.ಎಸ್. ಪಾಟೀಲ, ಎಫ್.ಬಿ. ವೆಂಕನಗೌಡ್ರ, ಎನ್.ಬಿ. ಹೊಸಗೌಡ್ರ, ಬಿ.ಸಿ. ಪಾಟೀಲ, ಆರ್.ಎಸ್. ಬಸಾಪುರ, ಸಿದ್ದಪ್ಪ ಬಸಾಪುರ, ರಾಮಪ್ಪ ಪೂಜಾರ, ಟಿ.ಎನ್. ಸಾಲಿ, ಎಸ್.ಎನ್. ತಳವಾರ ಇದ್ದರು.

ಮುನೇನಕೊಪ್ಪ ಆಗ್ರಹ: ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ಮತ್ತು ಮಳೆಯಿಂದ ನಲುಗಿ ಹೋದವರಿಗೆ ತಕ್ಷಣವೇ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.

‘ಸಂಪೂರ್ಣ ಹಾನಿಯಾದ ಮನೆಗಳಿಗೆ ₹10 ಲಕ್ಷ, ಭಾಗಶಃ ಜಖಂಗೊಂಡ ಮನೆಗಳಿಗೆ ₹5 ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಬಿದ್ದಿರುವ ಮನೆಗಳಿಗೆ ₹2.5 ಲಕ್ಷ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ತಕ್ಷಣವೇ ಪರಿಹಾರ ಬಿಡುಗಡೆ ಮಾಡದೇ ಹೋದಲ್ಲಿ ರೈತ ಸಮೂಹದೊಂದಿಗೆ ಹೋರಾಟ ಮಾಡಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.