ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯ ಹಾಸ್ಟೆಲ್ ಆವರಣ ಗೋಡೆಗೆ ಹೊಂದಿಕೊಂಡ ಚರಂಡಿಯಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಚರಂಡಿ ಸ್ವಚ್ಛತೆ ಕೈಗೊಂಡಿದ್ದ ಸಂದರ್ಭದಲ್ಲಿ ಶವದ ಅಸ್ಥಿಪಂಜರ ಮತ್ತು ತಲೆಬುರುಡೆ ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಲವು ತಿಂಗಳುಗಳ ಹಿಂದೆಯೇ ದೇಹ ಚರಂಡಿಗೆ ಬಿದ್ದಿರಬಹುದು ಎನ್ನುವ ಅನುಮಾನವಿದ್ದು, ಇದು ಕೊಲೆಯೋ ಅಥವಾ ಸಹಜ ಸಾವಾಗಿದೆಯೋ ಎಂಬುದನ್ನು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯ ರಕ್ಷಣೆ: ಇಲ್ಲಿನ ನವನಗರದ ಮನೆಯೊಂದರಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದೇ ವೇಳೆ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ಮನೆ ಮಾಲೀಕ ಹಾಗೂ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಸ್‌ನಲ್ಲಿ ಮಾಂಗಲ್ಯ ಕಳ್ಳತನ: ಇಲ್ಲಿನ ಬದಾಮಿ ನಗರದ ಹಿರಿಯ ನಾಗರಿಕರಾದ ಪದ್ಮಲತಾ ಶ್ರೀಪಾದ ಬರಿಗಾಲಿ ಅವರು ಬಸ್‌ನಲ್ಲಿ ಸಂಚರಿಸುವಾಗ ₹1.4 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಕಳವು ಮಾಡಿಕೊಂಡಿದ್ದಾರೆ.

ಸಂಬಂಧಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಲಕ್ಷ್ಮೇಶ್ವರಕ್ಕೆ ಹೋಗಿದ್ದ ಅವರು ಮರಳಿ ಹುಬ್ಬಳ್ಳಿಗೆ ಬಸ್‌ನಲ್ಲಿ ಬರುತ್ತಿದ್ದಾಗ ಸೋಮವಾರ ಈ ಕಳ್ಳತನ ನಡೆದಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.