ಹುಬ್ಬಳ್ಳಿ: ಹೂವು, ಹೂವಿನ ಸೌಂದರ್ಯ, ಅದರ ಪರಿಮಳ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಇದೆಲ್ಲವನ್ನೂ ನೋಡಿ ಆಸ್ವಾದಿಸಬೇಕೆಂದರೆ ಧಾರವಾಡದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಭೇಟಿ ನೀಡಬೇಕು

ಈ ಬಾರಿಯ ಕೃಷಿಮೇಳದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆ ಸಹಕಾರ ನೀಡಿದ್ದು, ಬಹುಪಾಲು ಕೃಷಿ ವಿಶ್ವವಿದ್ಯಾಲಯದಲ್ಲಿ ಸಿಗುವ ಹೂವುಗಳನ್ನು ಬಳಸಿಕೊಂಡು ವಿವಿಧ ಮಾದರಿಗಳನ್ನು ರಚಿಸಲಾಗಿದೆ.

ಸೇವಂತಿಗೆ, ಜರ್ಬೆರಾ, ಚೆಂಡು ಹೂವು, ಬಟನ್ ಗುಲಾಬಿ, ಹೆಲಿಕೊನಿಯಾ, ಯೋಲಸ್, ಟುಲಿಪ್, ಡಚ್ ಫ್ಲವರ್, ಆರ್ಕಿಡ್, ಸೂರ್ಯಕಾಂತಿ ಹೂವುಗಳನ್ನು ಬಳಸಿಕೊಂಡು ತರೇಹವಾರಿ ಹೂಗುಚ್ಛಗಳನ್ನು ತಯಾರಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ವಿದ್ಯಾಶ್ರೀ ಅಲಗವಾಡಿ ಅವರು ಹೂವುಗಳಿಂದ ಸಿದ್ಧಪಡಿಸಿರುವ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಮಾದರಿ ಪ್ರಮುಖ ಆಕರ್ಷಣೆ.

ತೆಂಗಿನ ಚಿಪ್ಪಿನಿಂದ ತಯಾರಿಸಿದ ಭಾರತದ ನೃತ್ಯರೂಪಕಗಳು, ತೆಂಗಿನ ನಾರಿನಿಂದ ತಯಾರಿಸಿದ ಗಣಪತಿ ಮುಖ, ಗಾರ್ಬೆಜ್ ಕವರ್ನಲ್ಲಿ ಬೆಳೆದ ಸೊಪ್ಪು, ನೀರಿನ ಆಶ್ರಿತ ಸಸ್ಯಗಳು, ಬೋನ್ಸಾಯ್ ಗಿಡಗಳು, ಔಷಧೀಯ ಸಸ್ಯಗಳು, ಕಲ್ಲಂಗಡಿಯಲ್ಲಿ ಮಾಡಲಾದ ಕಲಾಕೃತಿಗಳು, ವಿವಿಧ ತರಕಾರಿಗಳಿಂದ ಮಾಡಿದ ಕಲಾಕೃತಿಗಳು, ಸಿರಿಧಾನ್ಯದಿಂದ ಮಾಡಿದ ಆಲಂಕಾರಿಕ ವಸ್ತುಗಳನ್ನು ಜನರು ಹೆಚ್ಚು ವೀಕ್ಷಿಸಿದರು.

‘ಫಲಪುಷ್ಟ ಪ್ರದರ್ಶನಕ್ಕೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕೈಜೋಡಿಸಿದ್ದು, ಇದಕ್ಕಾಗಿ ವಾರದಿಂದ ನಿರಂತರ ತಯಾರಿ ನಡೆಸಲಾಗಿತ್ತು’ ಎಂದು ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕುಟುಂಬ ಸಂಪನ್ಮೂಲ ವಿಭಾಗದ ಪ್ರಾಧ್ಯಾಪಕಿ ವೀಣಾ ಎಸ್.ಜಾಧವ್ ತಿಳಿಸಿದರು.

ಗಮನ ಸೆಳೆದ ಪರಿಸರ ಸ್ನೇಹಿ ಉತ್ಪನ್ನಗಳು

ಫಲಪುಷ್ಪ ಪ್ರದರ್ಶನದಲ್ಲಿ ಚೆಂಡು ಹೂವು ಗುಲಾಬಿ ಸುಗಂಧರಾಜ ಹೂವಿನ ದಳಗಳನ್ನು ಒಣಗಿಸಿ ಅವುಗಳನ್ನು ಪುಡಿಮಾಡಿ ಅದರಿಂದ ಅಗರ್ಬತ್ತಿ ತಯಾರಿಸಿದ್ದು ಗಮನ ಸೆಳೆಯಿತು. ‘ಇದು ಆದಾಯ ತರುವ ಉತ್ಪನ್ನವಾಗಿದ್ದು ಸ್ತ್ರೀ ಸಬಲೀಕರಣ ಗುಡಿ ಕೈಗಾರಿಕೆಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಹೂವಿನಿಂದ ಅಗರ್ಬತ್ತಿಗಳನ್ನು ತಯಾರು ಮಾಡಲಾಗುತ್ತಿದೆ’ ಎಂದು ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕುಟುಂಬ ಸಂಪನ್ಮೂಲ ವಿಭಾಗದ ಪ್ರಾಧ್ಯಾಪಕಿ ವೀಣಾ ಎಸ್.ಜಾಧವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.