ಕಲಘಟಗಿ: ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿ ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ’ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು.

ಗ್ರಾಮದ ಮನೆ- ಮನೆ ಭೇಟಿ ನೀಡಿ ಸದರಿ ಅಭಿಯಾನದ ಬಗ್ಗೆ ಮಾಹಿತಿ ವೈಯಕ್ತಿಕ ಕಾಮಗಾರಿ ಬೇಡಿಕೆ ಪಟ್ಟಿಗೆಯಲ್ಲಿ ಸಾರ್ವಜನಿಕರಿಂದ ಹಾಗೂ ರೈತರಿಂದ ಕಾಮಗಾರಿ ಬೇಡಿಕೆ ಅರ್ಜಿ ಸಂಗ್ರಹಣೆ ಮಾಡಿದರು. ಪಂಚಾಯ್ತಿ ಸ್ವಚ್ಛ ವಾಹನದ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಪ್ಪ ಉಳಾಗಡ್ಡಿ ಮಾತನಾಡಿ, ‘ಜನರು ನರೇಗಾ ಯೋಜನೆಯಡಿ ತಮಗೆ ಬೇಕಾದ ವೈಯಕ್ತಿಕ ಕಾಮಗಾರಿ ಅರ್ಜಿ ಬರೆದು ಕಾಮಗಾರಿ ಪೆಟ್ಟಿಗೆಗೆ ಹಾಕಿದರೆ ಗ್ರಾಮ ಸಭೆ ನಡೆಸಿ ಕ್ರಿಯಾಯೋಜನೆಗೆ ಸೇರ್ಪಡೆ ಮಾಡುತ್ತೇವೆ’ ಎಂದರು.

ಗ್ರಾಮ ಪಂಚಾಯ್ತಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.