ಗುಡಗೇರಿ: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಉತ್ತಮ ಬೆಲೆ ಬಂದಿದೆ. ಆದರೆ, ಅದನ್ನು ಸಕಾಲಕ್ಕೆ ಮಾರಲಾಗದೆ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ರಕ್ಷಿಸಿಕೊಳ್ಳಲು ಆಗದೇ ರೈತರು ಪರದಾಡುವಂತಾಗಿದೆ.

ಕುಂದಗೋಳ ತಾಲ್ಲೂಕಿನ ಪಶುಪತಿಹಾಳ, ಗುಡಗೇರಿ, ಹರಲಾಪುರ, ಕಳಸ, ಸಂಕ್ಲೀಪುರ, ಸುತ್ತಾನಪುರ ಗ್ರಾಮದ 43 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಆರಂಭದಿಂದ ಇಂದಿನವರೆಗೂ ಅತಿಹೆಚ್ಚು ಮಳೆ ಸುರಿದಿದೆ. ಬೆಳೆಗೆ ರೋಗ ತಗುಲಿದ್ದು, ಅಲ್ಪಸ್ವಲ್ಪ ಉಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ.

‘ಬೆಳ್ಳುಳ್ಳಿ ಬೆಳೆ ಕಟಾವಿಗೆ ಬಂದಿದೆ. ಆದರೆ, ಮಳೆಯಿಂದ ಅಡ್ಡಿಯಾಗಿದೆ. ಕಟಾವು ಮಾಡಿ ಬೆಳೆಯನ್ನು ಮನೆಗೆ ತರಲಾಗದೆ ಹೊಲದಲ್ಲೇ ಬಿಟ್ಟಿದ್ದೇವೆ. ಇನ್ನೂ ಕೆಲವರು ಮನೆಗೆ ತಂದು ಅದನ್ನು ಒಣಗಿಸಲು ಕಷ್ಟಪಡುತ್ತಿದ್ದಾರೆ’ ಎಂದು ರೈತರು ತಿಳಿಸಿದರು.

‘ಬಣವೆ ಹಾಕಿ ಇಟ್ಟರೆ ಕಾವು ಬಂದು ಗಡ್ಡಿ ಕಪ್ಪಾಗುತ್ತದೆ. ತೆರೆದಿಡಬೇಕೆಂದರೆ ಸತತ ಮಳೆಯಿಂದ ತೊಂದರೆಯಾಗಿದೆ. ಮನೆಯ ಅಂಗಳ, ಖಾಲಿ ಜಾಗದಲ್ಲಿ ತಾಡಪತ್ರೆ ಹಾಕಿ ಅದರ ಮೇಲೆ ಬೆಳ್ಳುಳ್ಳಿ ಒಣಗಿಸುವುದು, ಮಳೆ ಬಂದಾಗ ಮುಚ್ಚುವುದೇ ಕೆಲಸವಾಗಿದೆ’ ಎಂದು ರೈತ ಬಾಹುಬಲಿ ಸೂಮಾಪೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಡಿಕೆ ಮಳೆ ಆಗಿದ್ದರೆ ಎಕರೆಗೆ 3 ಕ್ವಿಂಟಲ್ಗೂ ಹೆಚ್ಚು ಇಳುವರಿ ಸಿಗುತ್ತಿತ್ತು. ಈ ಸಲ ಸತತ ಮಳೆಯಿಂದ ಎಕರೆಗೆ 80 ಕೆ.ಜಿಯಿಂದ 1 ಕ್ವಿಂಟಲ್ವರೆಗೆ ಮಾತ್ರ ಇಳುವರಿ ಬಂದಿದೆ. 1 ಕ್ವಿಂಟಲ್ ಬೆಳ್ಳುಳ್ಳಿಗೆ ₹ 12 ಸಾವಿರದಿಂದ ₹16 ಸಾವಿರ ಬೆಲೆ ಇದೆ. ಕೈಗೆ ಸಿಗುವಷ್ಟು ಬೆಳೆ ರಕ್ಷಿಸಿಕೊಳ್ಳಲು ಕಷ್ಟಪಡುವಂತಾಗಿದೆ’ ಎಂದು ರೈತ ಮಲ್ಲೇಶ ಗಿರಿಮಲ್ಲ ತಿಳಿಸಿದರು.

ಕುಂದಗೋಳ ತಾಲ್ಲೂಕಿನಲ್ಲಿ ಕೆಲ ಗ್ರಾಮಗಳಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಬೆಳೆಯುತ್ತಾರೆ. ಸತತ ಮಳೆಯಿಂದ ಇಳುವರಿ ಕುಂಠಿತವಾಗಿದೆ
ಮಂಜುನಾಥ ಕರೋಸಿ ಸಹಾಯಕ ಅಧಿಕಾರಿ ತೋಟಗಾರಿಕೆ ಇಲಾಖೆ ಕುಂದಗೋಳ

‘ಬಿಳಿ ಬಂಗಾರ’ ಎಂದು ಕರೆಸಿಕೊಳ್ಳುವ ಬೆಳ್ಳುಳ್ಳಿಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಬಂದಿದೆ. ಆದರೆ ಸತತ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನಲ್ಲಿ ಬೆಳ್ಳುಳ್ಳಿ ಬೆಳೆದಿರುವ ರೈತರು ಫಸಲು ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಮತ್ತೊಂದೆಡೆ ಉಷ್ಣಾಂಶ ಏರಿಕೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಮೆಣಸು ಕಾಳುಕಟ್ಟಲು ಸಮಸ್ಯೆಯಾಗಿದೆ. ನೀರಿನ ಕೊರತೆ ನಡುವೆಯೇ ಈ ವರ್ಷ ಇಳುವರಿ ಕುಸಿತದ ಆತಂಕ ತಲೆದೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.