ಧಾರವಾಡ: ಬ್ಯಾಂಕ್ ಸಿಬ್ಬಂದಿ ವರ್ತನೆ ಹಾಗೂ ಫಸಲ್ ಭಿಮಾ ಹಣ ಖಾತೆಗೆ ಜಮಾ ಮಾಡದಿರುವುದನ್ನು ಖಂಡಿಸಿ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮಸ್ಥರು ಯುಕೊ ಬ್ಯಾಂಕಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘2016ನೇ ಸಾಲಿನ ಫಸಲ್ ಭಿಮಾ ಪರಿಹಾರದ ಹಣವು ಈಗಾಗಲೇ ಫಲಾನುಭವಿಗಳಿಗೆ ಮಂಜೂರಾಗಿ ಸಂಬಂಧಪಟ್ಟ ಬ್ಯಾಂಕ್ಗಳಿಗೆ ಬಂದಿದ್ದರೂ, ರೈತರ ಖಾತೆಗಳಿಗೆ ಜಮಾ ಆಗಿಲ್ಲ. ಬಂದ ಹಣವನ್ನು ಬ್ಯಾಂಕಿನವರು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ. ಇಂಥ ಸಂದರ್ಭದಲ್ಲಿ ವಿಮೆ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡರೆ, ರೈತರಿಗೆ ನಷ್ಟ ಆಗಲಿದೆ’ ಎಂದು ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಅಧಿಕಾರಿಗಳು, ‘ಫಸಲ್ ಬಿಮಾ ಪರಿಹಾರ ಹಣ ಬ್ಯಾಂಕಿಗೆ ಬಂದಿದೆ. ಆದರೆ, ಎಲ್ಲಾ ಖಾತೆಗಳನ್ನೂ ಲಾಕ್ ಮಾಡಲಾಗಿದೆ. ಯಾರ ಸಾಲ ಇಲ್ಲವೋ ಹಾಗೂ ಚಾಲ್ತಿ ಸಾಲ ಇರುವ ರೈತರಿಗೆ ಹಣ ನೀಡಲಾಗುವುದು. ಬಾಕಿ ಹೊಂದಿರುವ ಸಾಲಗಾರರ ಪರಿಹಾರವನ್ನು ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಮೇಲಧಿಕಾರಿಗಳಿಂದ ನಿರ್ದೇಶನ ಕೋರಿದ್ದು, ಮಾಹಿತಿ ಬಂದ ಮೇಲೆ ತಿಳಿಸಲಾಗುವುದು’ ಎಂದು ಹೇಳಿದರು.

ಇದನ್ನು ಒಪ್ಪದ ರೈತರು, ಪರಿಹಾರ ಹಣ ನೀಡಬೇಕು. ಇಲ್ಲವಾದಲ್ಲಿ, ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬ್ಯಾಂಕ್ ಅಧಿಕಾರಿಗಳು ಹಾಗೂ ರೈತರೊಂದಿಗೆ ಮಾತನಾಡಿದ ಪೊಲೀಸರು, ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.