ನವಲಗುಂದ: ‘ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಂತೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ದೊರೆಯಲಿ’ ಎಂದು ಶಿವಮೊಗ್ಗ ನ್ಯಾಯಾಲಯದ ನ್ಯಾಯಾಧೀಶ ಮಹಮ್ಮದಅಲಿ ಪೀರಸಾಬ ನಾಯಕ ಹೇಳಿದರು.

ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ದತ್ತಿ ನಿಧಿಗೆ ಅವರು ಶನಿವಾರ ₹50 ಸಾವಿರ ದೇಣಿಗೆ ನೀಡಿ ಮಾತನಾಡಿದರು.

ಪ್ರಧಾನ ಗುರು ಎನ್.ವಿ. ಕುರವತ್ತಿಮಠ ಮಾತನಾಡಿ, ‘ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ಮಹಮ್ಮದಅಲಿ ನಾಯಕ ಅವರ ದತ್ತಿನಿಧಿಯಿಂದ ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ಈ ದೇಣಿಗೆ ಹಣವನ್ನು ಶಾಲೆ ಹೆಸರಿನಲ್ಲಿ ಠೇವಣಿ ಮಾಡಲಾಗುವುದು’ ಎಂದರು.

ಅತಿಥಿ ಶಿಕ್ಷಕರಾದ ಎಸ್.ಎಸ್. ಲಾಂಡೆ, ಎಂ.ಎ. ಹತ್ತಿ, ಅರಣ್ಯ ಅಧಿಕಾರಿ ರೆಹಮಾನ ಸಾಬ್ ಪೀರಸಾಬ್ ನದಾಫ್, ಎಸ್ಡಿಎಂಸಿ ಕಾರ್ಯಾಧ್ಯಕ್ಷ ಉಮೇಶ ಶಿರೋಳ ಹಾಗೂ ಪದಾಧಿಕಾರಿಗಳು, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.