ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಜು. 14ರಂದು ‘ಭುವನ ಸುಂದರಿ’ಗೆ ಅದ್ದೂರಿ ಸ್ವಾಗತ

Published 12 ಜುಲೈ 2024, 16:31 IST
Last Updated 12 ಜುಲೈ 2024, 16:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಈಚೆಗೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ‘ಯುನಿವರ್ಸಲ್‌ ಪಿಟೈಟ್‌ ಯೂನಿವರ್ಸಲ್‌ 2024  (‘ಭುವನ ಸುಂದರಿ’) ಪ್ರಶಸ್ತಿ ಮುಡಿಗೇರಿಸಿಕೊಂಡ ಹುಬ್ಬಳ್ಳಿಯ ಡಾ.ಶ್ರುತಿ ಹೆಗಡೆ ಅವರನ್ನು ಧಾರವಾಡದ ಎಸ್‌.ಕೆ.ಮಾಡೆಲಿಂಗ್‌ ಏಜೆನ್ಸಿ ವತಿಯಿಂದ ಜುಲೈ 14ರಂದು ಬೆಳಿಗ್ಗೆ 11ಕ್ಕೆ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಗುವುದು’ ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಒಂದು ಕಿ.ಮೀ ಮೆರವಣಿಗೆ ನಡೆಯಲಿದ್ದು, ವಿವಿಧ ಮಹಿಳಾ ಮಂಡಳಗಳು ಭಾಗಿಯಾಗಲಿವೆ. ಜೊತೆಗೆ ಪಂಜಾಬಿ ನೃತ್ಯ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಎಸ್‌ಡಿಎಂ ಮೆಡಿಕಲ್‌ ಕಾಲೇಜಿನ ಡಾ.ಕಳಸೂರಿಮಠ, ಡಾ.ರಮೇಶ, ಪ್ರೊ.ಮಹೇಶ ದ್ಯಾವಪ್ಪನವರ, ಕರೆಗೌಡರ, ಸಿನಿಮಾ ನಿರ್ದೇಶಕ ಶರ್ಮಾ, ನಟ ಮಂಜುನಾಥಗೌಡ ಪಾಟೀಲ, ಗಿರಿಜಾ ಸಂಗೊಳ್ಳಿ, ಮಾದೇವಿ ಅಥಣಿ, ಸಹನಾ ಭಟ್‌ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಮೆರವಣಿಗೆಯ ನಂತರ ಸಭಾಭವನದ ಮುಂಭಾಗದಲ್ಲಿ ಹಾಗೂ ವೇದಿಕೆ ಮೇಲೆ  ಡಾ.ಶ್ರುತಿ ಹೆಗಡೆ ರ‍್ಯಾಂಪ್‌ ವಾಕ್‌  ಮಾಡುವರು. ನಂತರ ಅಮೆರಿಕಾದಲ್ಲಿ ಡಾ.ಶ್ರುತಿ ಪ್ರಶಸ್ತಿ ಪಡೆದ ದೃಶ್ಯವನ್ನು ವಿಡಿಯೊ ಮೂಲಕ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.

ಡಾ.ಶ್ರುತಿ ಅವರಿಗೆ ‘ಪೌರಸಮ್ಮಾನ’ ನೀಡಬೇಕು ಎಂದು ಮೇಯರ್‌ ಅವರಿಗೆ ಮನವಿ ಮಾಡಲಾಗುವುದು ಎಂದರು.

ಡಾ.ಕೃಷ್ಣ ಮಹಾಬಲೇಶ್ವರ ಹೆಗಡೆ, ಡಾ.ಕಮಲ ಹೆಗಡೆ, ಶಂಕರ ಧಾರವಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT