ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೆ. 3ರಂದು ನಡೆದಿದ್ದ ಚುನಾವಣೆಗೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮತ ಎಣಿಕೆ ಆರಂಭವಾಗಲು ಕ್ಷಣಗಣನೆ ಶುರುವಾಗಿದೆ.

82 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಎಲ್ಲಾ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆಮ್ ಆದ್ಮಿ ಪಕ್ಷದಿಂದ 41, ಜೆಡಿಎಸ್‌ನಿಂದ 49 ವಾರ್ಡ್‌ಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ ಸುಲಭವಾಗಿ ನಡೆಸಲು 140 ಜನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರತಿ ಚುನಾವಣಾಧಿಕಾರಿಗೆ ಮೂರು ಟೇಬಲ್‌ಗಳನ್ನು ಕೊಡಲಾಗಿದೆ.

ಒಟ್ಟು 16 ಜನ ಚುನಾವಣಾಧಿಕಾರಿಗಳಿದ್ದು, ಪ್ರತಿ ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್‌ಗಳ ಮತಎಣಿಕೆ ಆರಂಭವಾಗುತ್ತದೆ. ಮತಗಳ ಎಣಿಕೆಯ ಟೇಬಲ್‌ಗೆ ಪ್ರತಿ ವಾರ್ಡ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿಯ ಪರವಾಗಿ ಒಬ್ಬರಿಗೆ ಒಳಗಡೆ ಬರಲು ಅವಕಾಶ ನೀಡಲಾಗಿದೆ.

ಕಡಿಮೆ ಮತದಾನ ತಂದ ಆತಂಕ: ಪಾಲಿಕೆ ಚುನಾವಣೆಗೆ ಶೇ 53.81ರಷ್ಟು ಮಾತ್ರ ಮತದಾನವಾಗಿದ್ದು, ಎಲ್ಲ ಅಭ್ಯರ್ಥಿಗಳಲ್ಲಿ ಫಲಿತಾಂಶ ಏನಾಗುವುದೊ ಎನ್ನುವ ಆತಂಕ ಶುರುವಾಗಿದೆ.

ಹತ್ತು ವರ್ಷಗಳಿಂದ ಇಲ್ಲಿನ ಪಾಲಿಕೆಯಲ್ಲಿ ಅಧಿಕಾರ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಹೀಗಿದ್ದರೂ ಜೆಡಿಎಸ್ ಹಾಗೂ ಆಮ್ ಆದ್ಮಿ ಪಕ್ಷ ಸೇರಿದಂತೆ ಕೆಲವು ಪಕ್ಷಗಳ ಅಭ್ಯರ್ಥಿಗಳು ಆಯ್ದ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ.

ಒಟ್ಟು 8,18,096 ಮತದಾರರಲ್ಲಿ 4,40,251 ಮತದಾರರು ಹಕ್ಕು ಚಲಾಯಿಸಿದ್ದರು. ಇದಕ್ಕಾಗಿ 842 ಮತಯಂತ್ರಗಳನ್ನು ಸ್ಥಾಪಿಸಲಾಗಿತ್ತು. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಪುರುಷರೇ ಹೆಚ್ಚು ಮತದಾನದ ಹಕ್ಕು ಚಲಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.