ನವಲಗುಂದ: ರೈತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಸಾರ್ವಜನಿಕರಿಗೆ ಹೊರೆಯಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ಪ್ರತಿ ಹನಿ ನೀರಿನ ಮಹತ್ವ ಸಾರುವ ಜನತಾ ಜಲಧಾರೆ ಕಾರ್ಯಕ್ರಮ ಜೆಡಿಎಸ್ ಹಮ್ಮಿಕೊಂಡಿದೆ ಎಂದು ಜೆಡಿಎಸ್ ಮುಖಂಡ ದೇವರಾಜ್ ಕಂಬಳಿ ಹೇಳಿದರು.

ನಗರದ ರೈತಭವನದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷದ ಮುಖಂಡ ಶ್ರೀಶೈಲ ಮೂಲಿಮನಿ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿದ 123 ಶಾಸಕರು ಆಯ್ಕೆ ಯಾಗಬೇಕು ಎಂದರು.

ಕುಮಾರಸ್ವಾಮಿ ರೈತರ ಪರ ಇದ್ದಾರೆ. ಇಂದಿನ ಸರ್ಕಾರ ಕಮಿಷನ್ ಸರ್ಕಾರವಾಗಿದ್ದು, ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್. ತೋಟದ ಹೇಳಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಪಿ.ಬಿ. ಗಂಗಾಧರಮಠ, ಪ್ರಕಾಶ ಅಂಗಡಿ, ದೇವರಾಜ ಕಂಬಳಿ, ಶ್ರೀಶೈಲ ಮೂಲಿಮನಿ, ಜಿ. ಎನ್. ತೋಟದ, ಸುಭಾಷ ಚಂದ್ರಗೌಡ ಪಾಟೀಲ, ಕಾಲ್ಮೇಶ ಉಪ್ಪಾರ, ಪಕ್ಷಾತೀತ ರೈತ ಒಕ್ಕೂಟದ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.