ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗುರುವಾರ (ನವೆಂಬರ್ 30) ಕನಕದಾಸ ಜಯಂತಿ ಆಚರಿಸಲು ಹು–ಧಾ ಮಹಾನಗರ ಪಾಲಿಕೆ ಶ್ರೀರಾಮ ಸೇನಾ ಸಂಘಟನೆಗೆ ಷರತ್ತು ಬದ್ಧ ಅನುಮತಿ ನೀಡಿ, ಬುಧವಾರ ರಾತ್ರಿ ಆದೇಶ ಹೊರಡಿಸಿದೆ.

ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಮೈದಾನದಲ್ಲಿ ಜಯಂತಿ ಆಚರಿಸಲು ಅವಕಾಶ ನೀಡಿದೆ. ₹10 ಸಾವಿರ ಶುಲ್ಕ ಪಾವತಿಸಲು ಸೂಚಿಸಿ, 16 ಷರತ್ತುಗಳನ್ನು ವಿಧಿಸಿದೆ.

ಈದ್ಗಾ ಮೈದಾನದಲ್ಲಿ ಕನಕ ದಾಸ ಜಯಂತಿ ಆಚರಿಸಲು ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದೀವಟಗಿ ಮನವಿ ಸಲ್ಲಿಸಿದ್ದರು. ಈ ಕುರಿತು ಬುಧವಾರ ರಾತ್ರಿ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಮೇಯರ್, ಉಪಮೇಯರ್, ಸಭಾನಾಯಕ, ವಿರೋಧ ಪಕ್ಷದ ನಾಯಕ ಹಾಗೂ ಇತರ ಮುಖಂಡರು ಸಭೆ ನಡೆಸಿ ಅನುಮತಿ ನೀಡಲು ನಿರ್ಧರಿಸಲಾಯಿತು.

‘ಮೈದಾನದಲ್ಲಿ ಆಚರಿಸುವ ಕನಕದಾಸ ಜಯಂತಿಗೆ ಧಾರವಾಡ ಜಿಲ್ಲೆಯಿಂದ 150 ಕಾರ್ಯಕರ್ತರು ಬರುವರು. ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ. ಪೆಂಡಾಲ್ ಹಾಕಿ ಉತ್ಸವ ಆಚರಿಸುತ್ತಿದ್ದು, ಡೊಲ್ಲು ಕುಣಿತ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ’ ಎಂದು ಶ್ರೀರಾಮ ಸೇನಾ ಧಾರವಾಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಪಿ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.