ನವಲಗುಂದ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದಾಸೀನ ಮನೋಭಾವ ತೋರುತ್ತಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಡಿ.12ರಂದು 5 ಸಾವಿರ ಟ್ರ್ಯಾಕ್ಟರ್ಗಳ ಮೂಲಕ ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಬಸವಜಯ ಮೃಂತ್ಯುಂಜಯ ಸ್ವಾಮಿಜಿ ಎಚ್ಚರಿಸಿದರು.

ಬುಧವಾರ ಪಟ್ಟಣದ ವೀರಶೈಯ ಲಿಂಗಾಯತ ಸಭಾ ಭವನದಲ್ಲಿ ತಾಲ್ಲೂಕು ಪಂಚಮಸಾಲಿ ಸಮಾಜ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 2ಎ ಮೀಸಲಾತಿ ಕುರಿತು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಸಮಾಜದ ಬೇಡಿಕೆಗೆ ಸ್ಪಂದಿಸುವ ಮೂಲಕ ಸಕಾರಾತ್ಮಕ ಧೋರಣೆ ತಾಳಿದ್ದರು ಎಂದರು.

ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜದ 20 ಶಾಸಕರಿದ್ದರೂ ಸಿಎಂ ಅವರು 2ಎ ಮೀಸಲಾತಿ ಕುರಿತಾಗಿ ಸ್ಪಷ್ಟ ನಿಲುವು ತಾಳಲು ಹಿಂದೇಟು ಹಾಕುತ್ತಿರುವುದು ಸಮಾಜಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಸಮಾಜದ ವಿದ್ಯಾರ್ಥಿಗಳಿಂದ ಪತ್ರ ಚಳುವಳಿ ಆರಂಭಿಸಲಾಗಿದ್ದು ಸೆ.22ರಂದು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ವಕೀಲರ ಸಮಾವೇಶ ನಡೆಸಲಾಗುತ್ತಿದ್ದು, ಮುಂದಿನ ಹಂತದ ಹೋರಾಟವಾಗಿ ಬೆಂಗಳೂರು ಚಲೋ ಚಳವಳಿ ನಡೆಸಲಾಗುವುದು ಎಂದರು.

ಮಾಜಿ ಶಾಸಕರಾದ ಶಂಕರ ಪಾಟೀಲ್ ಮುನೇನಕೊಪ್ಪ, ಡಾ.ಆರ್.ಬಿ.ಶಿರಿಯಣ್ಣವರ, ಮೋಹನ ಲಿಂಬಿಕಾಯಿ, ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ್, ಜಿಲ್ಲಾ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ ಮಾತನಾಡಿ, ಸಮಾಜದಲ್ಲಿ ಅತೀ ಹೆಚ್ಚು ಬಡವರಿದ್ದು, ಸಮಾಜದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ 2ಎ ಮೀಸಲು ದೊರೆತಲ್ಲಿ ಶೈಕ್ಷಣಿಕವಾಗಿ ಬೆಳವಣೆಗೆ ಹೊಂದಲು ಸಾಧ್ಯವಿದ್ದು 2ಎ ಮೀಸಲಾತಿ ದೊರಕುವರೆಗೂ ಹೋರಾಟ ನಿಲ್ಲದು ಎಂದರು.

ಸಮಾಜದ ತಾಲ್ಲೂಕು ಹಾಗೂ ನಗರ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಬಾಳನಗೌಡರ, ಡಾ.ಸುರೇಶ ಕಮ್ಮಾರ, ಡಾ.ಕೆ.ಬಿ.ಮದ್ನೂರು, ಅಡಿವೆಪ್ಪ ಮನಮಿ, ವಿಜಯಲಕ್ಷ್ಮಿ ಪಾಟೀಲ, ಸದುಗೌಡ ಪಾಟೀಲ, ನಾಗಪ್ಪ ಸುಂಕದ, ಮಲ್ಲಿಕಾರ್ಜುನ ಹಿರೇಕೊಪ್ಪ, ವೈ.ಬಿ.ಕುರಟ್ಟಿ, ಭೀಮಣ್ಣ ಹೆಬ್ಬಳ್ಳಿ, ಎ.ಬಿ,ಕೊಪ್ಪದ, ಗೌರೀಶ ಕಮತರ, ಮಹೇಶ ಕುರ್ತಕೋಟಿ, ದೇವರಾಜ ಕರಿಯಪ್ಪನವರ, ಬಸವರಾಜ ಕೊಟಗಿ, ಈರಣ್ಣ ಚವಡಿ, ಪ್ರಭುಗೌಡ ಇಬ್ರಾಹಿಂಪೂರ, ಶರಣಪ್ಪ ಹಕ್ಕರಕಿ, ನಾಗನಗೌಡ ಪಾಟೀಲ್, ದ್ಯಾಮನಗೌಡ ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.