ಹುಬ್ಬಳ್ಳಿ: 'ವಿದ್ಯಾರ್ಥಿನಿಯರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಳಕಳಿಯಿದ್ದರೆ, ನೇಹಾ ಕೊಲೆ ಪ್ರಕರಣದ ಆರೋಪಿಯನ್ನು ಎನ್'ಕೌಂಟರ್ ಮಾಡಲು ಆದೇಶ ಹೊರಡಿಸಬೇಕು. ಅವರ ಮನೆಯನ್ನು ಬುರ್ಡೋಜರ್ ಹಚ್ಚಿ ನೆಲಸಮ ಮಾಡಬೇಕು' ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ನೇಹಾ ಕುಟುಂಬ ವರ್ಗದವರಿಗೆ ಶುಕ್ರವಾರ ಸಾಂತ್ವನ ಹೇಳಿ, ಮಾಧ್ಯಮದವರ ಜೊತೆ ಮಾತನಾಡಿದ ಅವರು, 'ಕೊಲೆ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ ನೀಡಬೇಕು ಎನ್ನುವ ಹೇಳಿಕೆಗಳೆಲ್ಲ ಹಾಸ್ಯಾಸ್ಪದ, ನಾಟಕವಾಗಿದೆ. ಅವನಿಗೆ ಜಾಮೀನು ದೊರೆಯುತ್ತದೆ, ಹೊರಗೆ ಬರುತ್ತಾನೆ. ನಮ್ಮ ಕಾನೂನು, ನ್ಯಾಯಾಂಗ ವ್ಯವಸ್ಥೆಯೇ ಸರಿಯಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಕಳಕಳಿಯಿದ್ದರೆ, ಜಮಾತಾದವರು ನೇಹಾ ಕೊಲೆ ಆರೋಪಿ ಫಯಾಜ್ ಅವರ ಮನೆಗೆ ಬಹಿಷ್ಕಾರದ ಪತ್ವಾ ತಕ್ಷಣ ಹೊರಡಿಸಬೇಕು. ಆ ವ್ಯಕ್ತಿಯ ಪರ ಯಾವ ವಕೀಲರು ವಾದ ಮಾಡಬಾರದು. ಮುಸ್ಲಿಂ ವಕೀಲರು ಅವನ ಪರವಾಗಿ ವಾದಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ' ಎಂದು ಎಚ್ಚರಿಸಿದರು.

'ಇದು ನೂರಕ್ಕೆ ನೂರರಷ್ಟು ಲವ್ ಜಿಹಾದ್ ಪ್ರಕರಣ. ಧರ್ಮಕ್ಕಾಗಿ ನಡೆದ ಯುದ್ಧ. ಆರೋಪಿ ಮೊದಲು ಅವಳನ್ನು ಪ್ರೀತಿಸಿದ್ದಾನೆ. ಮತಾಂತರ ಪ್ರಕ್ರಿಯೆ ನಡೆದಿಲ್ಲ ಎಂದು ನಂತರ ಅವಳನ್ನು ಹತ್ಯೆ ಮಾಡಿದ್ದಾನೆ. ಇದರಲ್ಲಿ ಅನುಮಾನವೇ ಇಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೆಯೋ, ಅಲ್ಲಿವರೆಗೆ ಮುಸ್ಲಿಂ ಕ್ರೌರ್ಯ ಜೀವಂತ ಇರುತ್ತದೆ' ಎಂದು ಆರೋಪಿಸಿದರು.

'ಕಾಲೇಜು ಆವರಣಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ವಿದ್ಯಾರ್ಥಿನಿಯರಿಗೆ ಕಾಲೇಜು ಹಾಗೂ ಹೊರಗಡೆ ಭದ್ರತೆಯೇ ಇಲ್ಲ ಎನ್ನುವುದು ಈ ಪ್ರಕರಣ ಸಾಬೀತುಪಡಿಸಿದೆ. ನೆಹಾಳನ್ನು ಫಯಾಜ್ ಐಸಿಸ್ ಮಾದರಿಯಲ್ಲಿ ಚಾಕು ಇರಿದು ಕೊಲೆ ಮಾಡಿದ್ದಾನೆ. ಇದನ್ನು ಗಮನಿಸಿದರೆ ಅವನು ಎಲ್ಲಿಯೋ ತರಬೇತಿ ಪಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಇದು ಕಾಂಗ್ರೆಸ್ ಬೆಳೆಸಿದ ವಿಷಬೀಜ. ಬ್ರಿಟಿಷರು ಇದ್ದಾಗ ನೀವು ಅವರ ಪರವಾಗಿದ್ದೀರಿ. ಸ್ವಾತಂತ್ರ್ಯ ಸಿಕ್ಕಿದ ನಂತರ ಮುಸ್ಲಿಮರ ಪರವಾಗಿದ್ದೀರಿ. ಭಯೋತ್ಪಾದಕರನ್ನು ನೀವು ಬೆಳೆಸುತ್ತಾ ಇದ್ದೀರಿ' ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.