ಹುಬ್ಬಳ್ಳಿ: ‘ನಿಗದಿತ ಡೆಸಿಮಲ್ ಪ್ರಮಾಣಕ್ಕಿಂತ ಹೆಚ್ಚು ಶಬ್ದ ಹೊರಡಿಸುತ್ತಿರುವ ಮಸೀದಿಗಳ ಧ್ವನಿವರ್ಧಕಗಳು ಬಂದ್ ಆಗಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿಯ ನವನಗರದಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಜಾನೆ 3.30ಕ್ಕೆ ಮಸೀದಿಗಳಿಂದ ಹೆಚ್ಚು ಡೆಸಿಬಲ್ ಪ್ರಮಾಣದ ಶಬ್ದ ಹೊರಡುತ್ತದೆ. ಜನರು ಮನೆಯಲ್ಲಿ ಅಲರಾಂ ಇಟ್ಟುಕೊಂಡು ಬೆಳಿಗ್ಗೆ ಏಳುತ್ತಾರೆ. ದೇವರ ಮೇಲೆ ಭಕ್ತಿ ಇದ್ದವರು ಪೂಜಿಸುತ್ತಾರೆ. ಹೀಗಿದ್ದಾಗ ಮಸೀದಿಗಳಲ್ಲಿ ಧ್ವನಿವರ್ಧಕ ಅವಶ್ಯವಿಲ್ಲ’ ಎಂದು ಹೇಳಿದರು.

‘ಮಸೀದಿಗಳಲ್ಲಿ ಧ್ವನಿವರ್ಧಕ ಬಂದ್ ಆದರೆ, ಹಿಂದೂ ದೇವಸ್ಥಾನಗಳಲ್ಲಿ ತಾನಾಗೇ ಧ್ವನಿವರ್ಧಕ ಬಳಕೆ ಬಂದ್ ಆಗುತ್ತದೆ. ಹಾಗೆ ನೋಡಿದರೆ, ಹೆಚ್ಚು ದೇವಾಲಯಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವುದಿಲ್ಲ. ವರ್ಷಕ್ಕೊಮ್ಮೆ ಗಣೇಶ ಹಬ್ಬದಲ್ಲಿ ಅನುಮತಿ ಪಡೆದು, ಧ್ವನಿವರ್ಧಕ ಬಳಸುತ್ತಾರೆ. ಶಬ್ದ ಮಾಲಿನ್ಯ ಆಗುತ್ತಿರುವುದು ಮಸೀದಿಗಳಿಂದ’ ಎಂದು ಹೇಳಿದರು.

‘ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ, ಸರ್ಕಾರ ತನ್ನ ಕಾರ್ಯವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲದಕ್ಕೂ ನ್ಯಾಯಾಲಯದ ಮೊರೆ ಹೋಗಲಾಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.