ಹುಬ್ಬಳ್ಳಿ: ಇಲ್ಲಿನ ಹೊಸೂರಿನ ಯಾವಗಲ್ ಪ್ಲಾಟ್ನಲ್ಲಿ ರಾಹುಲ್ ದಾಂಡೇಲಿ ಅವರು ಸಾಕಿದ್ದ 23 ಪಾರಿವಾಳಗಳ ಕುತ್ತಿಗೆ ಕೊಯ್ದು ಸಾಯಿಸಲಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮನೆಯ ಬಾಗಿಲು ಮುರಿದು, ಕಪಾಟಿನ ಬಾಗಿಲನ್ನು ತೆರೆದು ಹರಿತವಾದ ವಸ್ತುವಿನಿಂದ ಪಾರಿವಾಳದ ಕತ್ತು ಸೀಳಿ ಸಾಯಿಸಲಾಗಿದೆ’ ಎಂದು ರಾಹುಲ್ ದೂರು ನೀಡಿದ್ದಾರೆ.

ಬೈಕ್ ಸವಾರ ಸಾವು: ಕುಂದಗೋಳ ಕ್ರಾಸ್ನಿಂದ ನೂಲ್ವಿ ಕಡೆಗೆ ಬೈಕ್ನಲ್ಲಿ ಬರುತ್ತಿದ್ದ ಶಿರೂರ ನಿವಾಸಿ ಮಂಜುನಾಥ ಗಾಣಿಗೇರ (31) ಪರಣ್ಣವರ ಕೋಳಿ ಫಾರ್ಮ್ ಬಳಿ ಬೈಕ್ ನಿಯಂತ್ರಣ ತಪ್ಪಿ ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹16.83 ಲಕ್ಷವಂಚನೆ: ಪ್ಲೋರೆಕ್ಸ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಾಲ್ವರು ಸೇರಿ ಒಂಬತ್ತು ಮಂದಿಯಿಂದ ₹16.83 ಲಕ್ಷ ತುಂಬಿಸಿಕೊಂಡು ವಂಚಿಸಿದ್ದಾರೆ.

ಟ್ರೇಡಿಂಗ್ ಕಂಪನಿಯ ಕ್ಯಾಪ್ಮೋರೆ ಏಕ್ ಎಕ್ಸ್ನಲ್ಲಿ ಹಣ ಹೂಡಿಕೆ ಮಾಡಿದರೆ ಶೇ 50ರಷ್ಟು ಲಾಭ ನೀಡುವುದಾಗಿ ಗೋಪನಕೊಪ್ಪದ ಯೋಹಾನ ಜಮಖಂಡಿ ಅವರಿಗೆ ಆರೋಪಿ ಸಿದ್ದು ಜಿ. ಹೇಳಿದ್ದರು. ಅದನ್ನು ನಂಬಿ ಅವರು ₹1 ಲಕ್ಷ ಹೂಡಿಕೆ ಮಾಡಿದ್ದರು. ನಂತರ ಪರಿಚಯದ ಎಂಟು ಮಂದಿಯಿಂದ ಹಣ ಹೂಡಿಕೆ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.