ಹಳೇ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದವರು ಟೋಪಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸುತ್ತಿರುವುದು
ನನಗೀಗ 67 ವರ್ಷ. ಬಿ.ಪಿ. ಶುಗರ್ ಇದ್ದರೂ ಉಪವಾಸ ಆಚರಿಸುತ್ತೇನೆ. ಬಿಸಿಲು ಮಳೆ ಸೇರಿದಂತೆ ಪ್ರಕೃತಿಯಲ್ಲಾಗುವ ಯಾವುದೇ ಬದಲಾವಣೆಗಳೂ ಉಪವಾಸದ ಮೇಲೆ ಪರಿಣಾಮ ಬೀರುವುದಿಲ್ಲ. ಒಮ್ಮೆ ಅಭ್ಯಾಸವಾದರೆ ಅದು ಬದುಕಿನ ಭಾಗವೇ ಆಗುತ್ತದೆ
ಕೆ.ಚಮನ್‌ಸಾಬ್ ಮುಸ್ಲಿಂ ಸಮುದಾಯದ ಮುಖಂಡ
ಸಮುದಾಯದವರು ಹೆಚ್ಚಾಗಿ ಸೇರುವ ಮಸೀದಿ ಬಳಿಯೇ ಹಣ್ಣುಗಳ ಮಾರಾಟ ಮಾಡುತ್ತೇವೆ. ರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಣ್ಣುಗಳನ್ನು ಇಲ್ಲಿಯೇ ಸೇವಿಸುವವರಿಗಿಂತ ಮನೆಗೆ ಕೊಂಡೊಯ್ಯುವವರು ಜಾಸ್ತಿ
ಜಮೀರ್ ಖಾನ್ ಹಣ್ಣಿನ ವ್ಯಾಪಾರಿ
ವರ್ಷವಿಡೀ ದುಡಿಯುತ್ತೇವೆ ಇದೊಂದು ತಿಂಗಳು ಶ್ರದ್ಧೆಯಿಂದ ಉಪವಾಸ ಆಚರಿಸುತ್ತೇವೆ. ಮಟನ್ ಬಿರಿಯಾನಿ ಪರೋಟ ಸೇರಿದಂತೆ ಇನ್ನಿತರ ಮಾಂಸಹಾರ ಖಾದ್ಯಗಳ ಮಾರಾಟ ಸಂಜೆ ವೇಳೆ ಹೆಚ್ಚಾಗಿರುತ್ತದೆ
ರೆಹಮಾನ್ ಸಾಬ್ ಹೋಟೆಲ್ ವ್ಯಾಪಾರಿ
ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ
ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳ ಮಾರಾಟ ನಗರದೆಲ್ಲೆಡೆ ಹೆಚ್ಚಾಗಿದೆ. ರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ವಿವಿಧ ಹಣ್ಣುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಕಲ್ಲಂಗಡಿ ಪೈನಾಪಲ್ ಪಪ್ಪಾಯ ಬಾಳೆಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಂಜೆ 5ರಿಂದ 8ರ ಗಂಟೆ ವರೆಗೂ ಹಣ್ಣಿನ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ಹಣ್ಣುಗಳ ಒಂದು ಪ್ಲೇಟ್ (ಮಿಕ್ಸ್) ₹ 30ರಿಂದ ₹ 50ರ ವರೆಗೆ ಇದೆ. ಹಬ್ಬದಲ್ಲಿ ಖರ್ಜೂರಕ್ಕೆ ವಿಶೇಷ ಮಹತ್ವ ಇದೆ. ಇದಕ್ಕೆ ಹೆಚ್ಚಿನ ಪ್ರಾತಿನಿಧ್ಯ ಇದೆ. ಉಪವಾಸ ಮಾಡಿದವರು ಖರ್ಜೂರ ತಿಂದು ಉಪವಾಸ ಅಂತ್ಯಗೊಳಿಸುತ್ತಾರೆ. ನಂತರ ಆಹಾರ ಸ್ವೀಕರಿಸುತ್ತಾರೆ.
ಜಕಾತ್ ದಾನ– ಧರ್ಮ
ತಮ್ಮ ಆದಾಯ ಹಾಗೂ ವ್ಯವಹಾರಕ್ಕೆಂದು ಮೀಸಲಿಟ್ಟ ಆಸ್ತಿಯಲ್ಲಿ ಶೇ 2.5 ರಷ್ಟು ಜಕಾತ್ ಅನ್ನು ಸಹೋದರ – ಸಹೋದರಿಯರಿಗೆ ನೀಡುತ್ತಿದ್ದು ಒಂದು ವೇಳೆ ಅವರು ಆರ್ಥಿಕವಾಗಿ ಉತ್ತಮವಾಗಿದ್ದರೆ ಅನಾಥ ಶಾಲೆಯ ಮಕ್ಕಳಿಗೆ ಅರ್ಹ ಬಡವರಿಗೆ ನೀಡಲಾಗುತ್ತದೆ. ಇನ್ನು ಬಡವರು ಅಶಕ್ತರಿಗೆ ದಾನ ಧರ್ಮ ನೀಡಲಾಗುತ್ತದೆ. ಈ ತಿಂಗಳಲ್ಲಿ ದಾನ ಧರ್ಮ ನೀಡಿದರೆ ಹೆಚ್ಚಿನ ಪುಣ್ಯ ಲಭಿಸುತ್ತದೆ ಎನ್ನುವುದು ಸಮುದಾಯದವರ ನಂಬಿಕೆಯಾಗಿದೆ ಎಂದು ಸಮುದಾಯದ ಮುಖಂಡ ಕೆ.ಚಮನ್‌ಸಾಬ್ ತಿಳಿಸಿದರು.