ಕಲಘಟಗಿ: ಕಬ್ಬು ಬೆಳೆಗಾರರ ಸಂಘಟನೆ ಹೋರಾಟದಿಂದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಕಡಿತಗೊಳಿಸಿ ಪ್ರತಿ ಟನ್ ಕಬ್ಬಿಗೆ ₹183 ಹಳಿಯಾಳದ ಈಐಡಿ ಶುಗರ್ ಕಾರ್ಖಾನೆಯವರು ನೀಡಲು ಒಪ್ಪಿಕೊಂಡಿದ್ದು ಬಾಕಿ ಉಳಿದ ₹73 ಕೊಡಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾ ಕಬ್ಬು ಬೆಳೆಗಾರರ ಸಂಘಟನೆಯಿಂದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ ಮಾತನಾಡಿ, ‘ಕಳೆದ ವರ್ಷ ತಾಲ್ಲೂಕಿನ ರೈತರ ಸುಮಾರು ಆರು ಲಕ್ಷ ಟನ್ ಕಬ್ಬನ್ನು ನುರಿಸಿದ್ದು ಇದರ ಲಾಭ ರೈತರಿಗೆ ನೀಡುವುದು ಹಾಗೂ ಕಳೆದ ವರ್ಷ ಸರ್ಕಾರ ಆದೇಶ ಮಾಡಿದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ₹256 ಮತ್ತು ಉಪ ಉತ್ಪನ್ನಗಳ ಲಾಭಾಂಶದಲ್ಲಿ ₹119ಅನ್ನು ರೈತರಿಗೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಬ್ಬು ಕಟಾವು ಮಾಡುವಾಗ ರೈತರು ಲಗಾನಿ ವೆಚ್ಚ ನೀಡಬಾರದು ಹಾಗೂ ಪ್ರತಿ ಗ್ರಾಮವಾರು ಕಬ್ಬು ಬೆಳೆಗಾರರ ಆದ್ಯತಾ ಪಟ್ಟಿ ಪ್ರದರ್ಶಿಸಲು ಒತ್ತಾಯಿಸಲಾಯಿತು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಬೆಳಗಾವಕರ, ಉಪ್ಪಾಧ್ಯಕ್ಷ ಉಳವಪ್ಪ ಬಳಿಗೆರ, ವಸಂತ ಡಾಕಪ್ಪನವರ, ಶಂಭು ಬಳಿಗೇರ, ಮಾದೇವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.