ಹುಬ್ಬಳ್ಳಿ: ಗಲಭೆ ಸಂಬಂಧ ಬಂಧಿತರಾಗಿರುವವರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಘಟನೆಗೆ ಕುಮ್ಮಕ್ಕು ನೀಡಿ ನಾಟಕವಾಡುತ್ತಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮತ್ತು ಮುಖಂಡ ಅಲ್ತಾಫ್ ಕಿತ್ತೂರ ಅವರನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರದೇಶ ಹಾಗೂ ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು .

ಇದೊಂದು ಪೂರ್ವ ನಿಯೋಜಿತ ಕೃತ್ಯ. ರಜಾಕ್ ಅಕಾಡೆಮಿ ಮತ್ತು ರೀಬಿಲ್ಟ್ ಬಾಬರ್ ಮಸೀದಿ ಸಂಘಟನೆ ಮಾಡಿಕೊಂಡಿದ್ದಾರೆ. ನಗರದ ಎಲ್ಲ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಒಂದು ಗಲಾಟೆಗೆ ಎಲ್ಲರೂ ಹೆದರುವುದು ಏಕೆ. ಗಲಭೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಜನರ ಬಂಧನ ಆಗಬೇಕು. ಬೇಕಿದ್ದರೆ ನಾವೇ ಹೆಸರು ಕೊಡುತ್ತೇವೆ. ಪೊಲೀಸರು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ಮತ್ತೊಂದು ಕೆ.ಜಿ., ಡಿ.ಜಿ. ಹಳ್ಳಿ ರೀತಿಯ ಗಲಭೆಯನ್ನು ಪೊಲೀಸರು ತಪ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ಕಲ್ಲು ತೂರಾಟ ಘಜ್ನಿ ಮನಸ್ಥಿತಿ ತೋರುತ್ತದೆ. ಸ್ಟೇಟಸ್ನಲ್ಲಿ ಏನಿದೆ. ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೆ ಏನಾಗುತ್ತದೆ. ಬೆಂಗಳೂರು ಮಸೀದಿ ಮೇಲೆ ಕೇಸರಿ ಧ್ವಜ, ಹಿಜಾಬ್ ಹಾಕಿಲ್ಲವೆ. ಗಲಾಟೆಗೆ ಇದೊಂದು ಕಾರಣ ಅಷ್ಟೇ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಮಾಡಿರುವ ಭಯ ಭೀತಿಯನ್ನು ಇಲ್ಲಿ ಸೃಷ್ಟಿಸುವ ಹುನ್ನಾರ ಇದಾಗಿದೆ.

ಮಸೀದಿಗಳಲ್ಲಿ ಆಜಾನ್ ಬಂದ್ ಮಾಡಲು ಮೇ 9ರ ತನಕ ಗಡುವು ನೀಡುತ್ತೇವೆ. ನಂತರ ದೇವಸ್ಥಾನಗಳಲ್ಲಿ ಓಂಕಾರ, ಭಜನೆ ಹೀಗೆ ಕಾರ್ಯಕ್ರಮಗಳು ಆರಂಭವಾಗಲಿದೆ. ನೆಪ ಮಾತ್ರಕ್ಕೆ ನೊಟೀಸ್ ನೀಡಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.