ಧಾರವಾಡ: 'ಮೋದಿ ಅಲೆ ಕೆಲವು ಕಡೆ ಮಾತ್ರ ಇದೆ, ಎಲ್ಲ ಕಡೆ ಇಲ್ಲ. ಮೋದಿ ಅವರು ಗೆದ್ದಿರುವುದೇ 1.5 ಲಕ್ಷ ಮತಗಳ ಅಂತರದಲ್ಲಿ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕುಟುಕಿದರು.

ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಧಾನಿಗಳು 5 ಲಕ್ಷಕ್ಕೂ ಹೆಚ್ಚು ಅಂತರ ಪಡೆದವರೇ ಹೆಚ್ಚು. ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಎರಡನೇ ಪ್ರಧಾನಿ ಮೋದಿ. ಚಂದ್ರಶೇಖರ್ ಅವರು 1.5 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಹೆಸರಿನಲ್ಲೇ ಮತಯಾಚಿಸಿದರು. ಇಲ್ಲಿ ಗೆಲುವಿನ ಅಂತರ ಎಷ್ಟಿದೆ? ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿತು. ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಗಳಿಕೆ ಶೇ 11 ಹೆಚ್ಚಾಗಿದೆ ಎಂದರು.

ಇದೇ ವೇಳೆ ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮ ಸಮೀಪ ತುಪ್ಪರಿ ಹಳ್ಳ ಪ್ರದೇಶವನ್ನು ಅವರು ಪರಿಶೀಲಿಸಿದರು. ಶಾಸಕ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಸಾಥ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.