ಧಾರವಾಡ: ನಾಡಿನ ಶ್ರೇಷ್ಠ ಗಾಯಕ ಪಂ.ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಯ ಸಹಯೋಗದಲ್ಲಿ ನಗರದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಮೂಲಕ ‘ಭೀಮಪಲಾಸ ಸಂಗೀತೋತ್ಸವ 2021–22’ ಶೀರ್ಷಿಕೆಯಡಿ ವರ್ಷಪೂರ್ತಿ ನಾಡಿನ ವಿವಿಧೆಡೆ, ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಕುರತು ಟ್ರಸ್ಟ್ ಗುರುವಾರ ಪ್ರಕಟಣೆ ಹೊರಡಿಸಿದ್ದು, ‘ಫೆ. 7ರಂದು ಧಾರವಾಡದಲ್ಲಿ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಮುಂಬೈನ ಹಿರಿಯ ಗಾಯಕ ಡಾ. ಭರತ ಬಲವಳ್ಳಿಯವರ ಕಛೇರಿ ಮೂಲಕ ಈ ಸಂಗೀತೋತ್ಸವಕ್ಕೆ ಮುನ್ನುಡಿ ಬರೆಯಲಿದೆ. ಧಾರವಾಡದ ಪಂ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಂ. ಎಂ.ವೆಂಕಟೇಶಕುಮಾರ, ಪಂ. ಗಣಪತಿ ಭಟ್ಟ ಹಾಸಣಗಿ, ಪಂ.ಕೈವಲ್ಯಕುಮಾರ ಗುರವ ಅವರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಲಾಗಿದೆ.

ಧಾರವಾಡದಿಂದ ಆರಂಭಗೊಳ್ಳುವ ಈ ಸಂಗೀತೋತ್ಸವ, ಫೆ. 13ರಂದು ಉತ್ತರ ಕನ್ನಡದ ಕುಮಟಾದಲ್ಲಿ ಪಂ. ವಿಜಯ ಕೋಪರಕರ ಹಾಗೂ ರಮ್ಯಾ ರೇಷ್ಮಾ ಭಟ್ ಸಹೋದರಿಯರ ಕಛೇರಿ, ಮಾರ್ಚ್ 6ರಂದು ಬೆಳಗಾವಿಯಲ್ಲಿ ಮುಗ್ಧಾ ವೈಶಂಪಾಯನ, ಏ. 10ರಂದು ಮೈಸೂರಿನಲ್ಲಿ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಗಾಯ ಆಯೋಜನೆಗೊಂಡಿದೆ.

ಮೇ 23ರಂದು ಗದುಗಿನಲ್ಲಿ ಪಂ. ಜಯತೀರ್ಥ ಮೇವುಂಡಿ ಮತತು ಷಡ್ಜ್ ಗೋಡ್ಖಿಂಡಿ ಕೊಳಲು ವಾದನ. ಜೂನ್ 27ರಂದು ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರ ಗಾಯನ ಬಾಗಲಕೋಟೆಯಲ್ಲಿ, ಜುಲೈ 25ಕ್ಕೆ ಪಂ. ಕೈವಲ್ಯಕುಮಾರ ಗುರವ ಅವರ ಗಾಯನ ವಿಜಯಪುರದಲ್ಲಿ, ಆ. 29ರಂದು ಪಂಡಿತ್ ವೆಂಕಟೇಶಕುಮಾರ ಅವರ ಗಾಯನ ಶಿವಮೊಗ್ಗದಲ್ಲಿ ಆಯೋಜನೆಗೊಂಡಿದೆ.

ಅ. 27ರಂದು ಪಂ. ಗಣಪತಿ ಭಟ್ ಹಾಸಣಗಿ ಕುಂದಾಪುರದಲ್ಲಿ, ನ. 21ರಂದು ಸಾವನಿ ಶೇಂಡೆ ಅವರು ಉಡುಪಿಯಲ್ಲಿ ತಮ್ಮ ಗಾಯನ ಪ್ರಸ್ತುತಪಡಿಸಲಿದ್ದಾರೆ. ಇದರೊಂದಿಗೆ ಅಗತ್ಯ ಹಣಕಾಸಿನ ಆಧಾರದ ಮೇಲೆ 2022ರ ಜನೆವರಿ ಮತ್ತು ಫೆಬ್ರುವರಿಯಲ್ಲಿ 3ರಿಂದ 5 ದಿನಗಳ ಬೃಹತ್ ಸಂಗೀತೋತ್ಸವವನ್ನು ಧಾರವಾಡ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ ಪುಣೆ, ಮುಂಬೈ, ಹೈದರಾಬಾದ್, ಗೋವಾಗಳಲ್ಲೂ ಕಾರ್ಯಕ್ರಮ ಆಯೋಜಿಸಲಾಗುವುದು. ಇದರೊಂದಿಗೆ ತಿಂಗಳೊಂದರಂತೆ ವರ್ಷಪೂರ್ತಿಯಾಗಿ ಧಾರವಾಡದಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.