ಹುಬ್ಬಳ್ಳಿ: ಬಿಆರ್ಟಿಎಸ್ ಯೋಜನೆ ಅನುಷ್ಠಾನಕ್ಕೆ ಹುಬ್ಬಳ್ಳಿ–ಧಾರವಾಡದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಯಿತು. ಆದರೆ, ಅದಕ್ಕೆ ಪರ್ಯಾಯವಾಗಿ ಅಷ್ಟು ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸಿಲ್ಲ. ಸಸಿಗಳನ್ನು ನೆಟ್ಟು ಪೋಷಿಸುವ ಪ್ರಕ್ರಿಯೆ ಕೂಡ ನೆರವೇರಲಿಲ್ಲ.

ಹುಬ್ಬಳ್ಳಿ–ಧಾರವಾಡ ಮಧ್ಯೆ ಈ ಹಿಂದೆ ರಸ್ತೆ ಬದಿ ಮಾವು, ಬೇವು, ಆಲ, ಅರಳಿ, ಹುಣಸೆ ಸೇ 50 ರಿಂದ 100 ವರ್ಷಗಳ ಬೃಹತ್ ಮರಗಳು ಇದ್ದವು. ರಸ್ತೆಯಲ್ಲಿ ಸಂಚರಿಸುವಾಗ ನೆರಳು ನೀಡುತ್ತಿದ್ದವು. ಇಡೀ ಮಾರ್ಗ ಹಸಿರಾಗಿ ಕಾಣುತ್ತಿತ್ತು. ಈಗ ಎಲ್ಲವೂ ಬರಡಾದಂತೆ ಕಾಣುತ್ತದೆ ಎಂಬ ಬೇಸರ ಪರಿಸರ ಪ್ರೇಮಿಗಳದ್ದು.

‘ಸಂಸ್ಥೆಯ ವೆಬ್ಸೈಟ್ನಲ್ಲಿನ ಮಾಹಿತಿ ಪ್ರಕಾರ ಬಿಆರ್ಟಿಎಸ್ ಯೋಜನೆಗಾಗಿ 4 ಸಾವಿರ ಮರಗಳನ್ನು ಕಡಿಯಲಾಗಿದೆ. ಅದಕ್ಕೆ ಪರ್ಯಾಯವಾಗಿ 27,510 ಗಿಡಮರಗಳನ್ನು ಬೆಳೆಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಅವು ಎಲ್ಲಿಯೂ ಕಾಣಸಿಗುವುದಿಲ್ಲ’ ಎಂಬುದು ಹುಬ್ಬಳ್ಳಿಯ ವಿದ್ಯಾನಗರದ ಭಗತ್ಸಿಂಗ್ ಸೇವಾ ಸಮಿತಿಯ ಅಧ್ಯಕ್ಷ ಶಶಿಶೇಖರ ವಿ.ಡಂಗನವರ ಅವರ ದೂರು.

‘ಸರ್ಕಾರಿ ಕಟ್ಟಡಗಳು, ಶಾಲೆ, ಕಾಲೇಜುಗಳ ಆವರಣ, ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ದಾಖಲೆಗಳಲ್ಲಿ ಮಾತ್ರ ಇದೆ’ ಎನ್ನುತ್ತಾರೆ ಅವರು.

‘ಎಷ್ಟು ಗಿಡಗಳನ್ನು ನೆಡಲಾಗಿದೆ ಎಂದು ಬಿಆರ್ಟಿಎಸ್ ಅಧಿಕಾರಿಗಳು, ಜಿಲ್ಲಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಈವರೆಗೂ ಉತ್ತರ ನೀಡಿಲ್ಲ’ ಎಂದರು.

‘ಯೋಜನೆಯ ಆರಂಭದಲ್ಲಿ 1 ಮರ ಕಡಿದರೆ 10 ಮರ ನೆಡಬೇಕು ಎಂಬ ಒಪ್ಪಂದವಾಗಿತ್ತು. ಅದರಂತೆ ಕೆಲವು ಕಡೆ ಗಿಡಗಳನ್ನು ಬೆಳೆಸಲಾಗಿದೆ. ಉಳಿದ ಕಡೆ ನಿರ್ವಹಣೆ ಇಲ್ಲದೆ ಗಿಡಗಳು ಹಾಳಾಗಿವೆ’ ಎಂದು ಹುಬ್ಬಳ್ಳಿ–ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಹೇಳಿದರು.

ಕೆಲಗೇರಿ ಕೆರೆ ಸುತ್ತ, ಸರ್ಕಾರಿ ಶಾಲೆ ಆವರಣದಲ್ಲಿ ಹಚ್ಚಿದ್ದ ಗಿಡಗಳು ಸತ್ತು ಹೋಗಿವೆ. ಆಲಂಕಾರಿಕ ಗಿಡಗಳನ್ನು ಹಚ್ಚಿ ಅವುಗಳನ್ನು ಮರಗಳ ಲೆಕ್ಕಕ್ಕೆ ಸೇರಿಸಿದ್ದಾರೆ. ಅದರ ಬದಲು ಆಲ, ಮತ್ತಿ, ಅರಳಿ ಗಿಡಗಳನ್ನು ಬೆಳೆಸಬೇಕು ಎಂಬುದು ಅವರ ಒತ್ತಾಯ.

ನಿಷೇಧಿತ ಅಕೇಶಿಯಾ ಮರಗಳೂ ಇವೆ: ಅಕೇಶಿಯಾ, ನೀಲಗಿರಿ ಮರಗಳು ಅಂತರ್ಜಲವನ್ನು ಹೀರಿ ಭೂಮಿಯನ್ನು ಬರಡು ಮಾಡುತ್ತವೆ. ಈ ಕಾರಣಕ್ಕೆ ಈ ಮರಗಳನ್ನು ಬೆಳೆಸುವುದನ್ನು ನಿಷೇಧಿಸಲಾಗಿದೆ. ಆದರೆ, ಬಿಆರ್ಟಿಎಸ್ ಮಾರ್ಗದ ಡಿವೈಡರ್ಗಳಲ್ಲಿ ಈ ಸಣ್ಣಪುಟ್ಟ ಗಿಡಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.