ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ನಿರ್ಮಾಣದ ಮಾಲೀಕರು ರಸ್ತೆ ಬದಿಯ 20 ವರ್ಷದ ಬೃಹತ್ ಆಕಾಶ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಡಿದು ಹಾಕಿದ ಘಟನೆ ಗುರುವಾರ ವಿದ್ಯಾನಗರದ ಖೋಡೆ ಹಾಸ್ಟೆಲ್ ಹಿಂಭಾಗದಲ್ಲಿ ನಡೆದಿದೆ.

‘ವಿಶಾಲವಾಗಿ ಹರಡಿದ್ದ ಆಕಾಶ ಮರದಿಂದ ಉತ್ತಮ ಗಾಳಿ ಮತ್ತು ನೆರಳು ಸಿಗುತಿತ್ತು. ಮನೆ ನಿರ್ಮಾಣಕ್ಕೆ ಆ ಮರದಿಂದ ಯಾವ ಅಡ್ಡಿಯೂ ಇರಲಿಲ್ಲ. ಅನಗತ್ಯವಾಗಿ ರಂಬೆಗಳನ್ನು ಕಡಿದು, ಮರ ನಾಶ ಪಡಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಹಿರೇಮಠ್ ದೂರಿದರು.

‘ಸ್ಮಾರ್ಟ್ ಸಿಟಿ ಅಭಿವೃದ್ಧಿ ನೆಪದಲ್ಲಿ ಈಗಾಗಲೇ ನಗರದಲ್ಲಿ ಸಾಕಷ್ಟು ಗಿಡ–ಮರಗಳನ್ನು ನಾಶ ಮಾಡಲಾಗಿದೆ. ಬಡಾವಣೆ, ನಗರಗಳಲ್ಲಿ ಇರುವ ಮರಗಳನ್ನಾದರೂ ಸಂರಕ್ಷಿಸಬೇಕಾದ ನಿವಾಸಿಗಳೇ ಸಕಾರಣವಿಲ್ಲದೇ ಈ ರೀತಿ ಮರಗಳನ್ನು ನಾಶ ಮಾಡುತ್ತಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಮನೆ ನಿರ್ಮಾಣಕ್ಕೆ ಮರದ ಕೊಂಬೆಗಳು ಅಡ್ಡಿಯಾಗಿದ್ದವು. ಮರ ತೆರವುಗೊಳಿಸುವಂತೆ ತಿಂಗಳ ಹಿಂದೆಯೇ ಪಾಲಿಕೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ಕೋರಲಾಗಿತ್ತು. ಆದರೆ, ಸ್ಪಂದನೆ ಸಿಗಲಿಲ್ಲ. ಅದಕ್ಕೆ ಮರದ ರಂಬೆಗಳನ್ನು ಕಡಿಸಿದೆ.ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಇದೆ. ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಕ್ಕೆ ಬದ್ಧನಾಗಿರುವೆ’ ಎಂದು ಮನೆ ನಿರ್ಮಾಣದ ಮಾಲೀಕ ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರವನ್ನು ತೆರವು ಮಾಡುವ ಮುಂಚೆಯೇ ಪ್ರಕಾಶ್ ಅವರು ಮರದ ರಂಬೆಗಳನ್ನು ಕಡೆದು ಹಾಕಿಸಿದ್ದಾರೆ. ಈಗಾಗಲೇ ಕಡೆದಿರುವ ಮರದ ರಂಬೆಗಳನ್ನು ಅರಣ್ಯ ಇಲಾಖೆಗೆ ಸ್ಥಳಾಂತರಿಸಲಾಗಿದೆ. ಇಲಾಖೆಯ ನಿಯಮದನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು‘ ಎಂದು ಹುಬ್ಬಳ್ಳಿ ಧಾರವಾಡ ಉಪ ವಲಯ ಅರಣ್ಯಾಧಿಕಾರಿ ರಮೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.