ಹುಬ್ಬಳ್ಳಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧವೆಯು ಅದೇ ಜಾತಿಯ ಪುರುಷನನ್ನು ಪುನರ್ವಿವಾಹವಾದಾಗ ಸರ್ಕಾರವು ಪ್ರೋತ್ಸಾಹಧನದ ರೂಪದಲ್ಲಿ ₹3 ಲಕ್ಷ ನೀಡುತ್ತದೆ. ಆದರೆ, ಈ ಯೋಜನೆ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇಲ್ಲ. ಅನುದಾನದ ಕೊರತೆಯಿಂದ ಹಲವರಿಗೆ ಪ್ರೋತ್ಸಾಹ ಧನವೂ ಸಿಕ್ಕಿಲ್ಲ.

ಸಮಾಜಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, 2015–16 ರಿಂದ 2023–24ನೇ ಸಾಲಿನವರೆಗೆ ಪ್ರೋತ್ಸಾಹಧನಕ್ಕಾಗಿ ರಾಜ್ಯದ 513 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 336 ಮಂದಿಗಷ್ಟೇ ಪ್ರೋತ್ಸಾಹಧನ ಸಿಕ್ಕಿದೆ.

‘ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಗ್ರಾಮಗಳಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ವಿಧವಾ ಪುನರ್ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಕೆ ಪ್ರಮಾಣ ಕಡಿಮೆ. ಹೆಚ್ಚಿನ ಮಂದಿ ಮತ್ತೆ ಮದುವೆ ಆಗದ ಕಾರಣ ಅಥವಾ ಮದುವೆ ಮಾಡಿಕೊಂಡರೂ ಹೇಳಿಕೊಳ್ಳಲು ಹಿಂಜರಿಯುವ ಕಾರಣ ಅರ್ಜಿ ಸಲ್ಲಿಕೆ ಪ್ರಮಾಣ ಕಡಿಮೆ ಆಗಿರಬಹುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಧಾರವಾಡದ ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರ ಮಾಹಿತಿ ನೀಡಿದರು.

‘ನಿಯಮದಲ್ಲಿ ಸೂಚಿಸಿದ್ದಕ್ಕಿಂತ ಅರ್ಜಿದಾರರ ವಯಸ್ಸು, ಆದಾಯ ಹೆಚ್ಚಾಗಿದ್ದಲ್ಲಿ ಪ್ರೋತ್ಸಾಹಧನಕ್ಕೆ ಅರ್ಜಿ ಪರಿಗಣಿಸಲ್ಲ’ ಎಂದರು.

‘ಪತಿ ಮೃತಪಟ್ಟಾಗ ಪತ್ನಿ ಆತ್ಮಸ್ಥೈರ್ಯ ಕಳೆದುಕೊಂಡಿರುತ್ತಾಳೆ. ಕೆಲವರು ಮದುವೆಯಾಗಲು ಇಚ್ಛಿಸಲ್ಲ. ಪುನರ್ ವಿವಾಹ ಆಗಲು ಬಯಸುವವರಿಗೆ ಸಮಾಜ ಕಲ್ಯಾಣ ಇಲಾಖೆಯ ಈ ಯೋಜನೆ ಉಪಯುಕ್ತವಾಗಿದೆ. ಮಹಿಳೆಯರು ಧೈರ್ಯದಿಂದ ಯೋಜನೆಯ ಪ್ರಯೋಜನ ಪಡೆಯಬೇಕು. ಸರ್ಕಾರವೂ ಹೆಚ್ಚಿನ ಮಿತಿ ಹೇರದೆ, ಅಧಿಕ ಅನುದಾನ ಒದಗಿಸಿ ಹೆಚ್ಚಿನ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮಾನವಹಕ್ಕುಗಳ ಹೋರಾಟಗಾರ್ತಿ ಇಸಾಬೆಲ್ಲ ಝೇವಿಯರ್ ತಿಳಿಸಿದರು.

ಷರತ್ತುಗಳೇನು?

ಪರಿಶಿಷ್ಟ ಜಾತಿ/ಪಂಗಡದ ವಿಧವೆಯ ವಯೋಮಿತಿ 18–42, ವರನ ವಯೋಮಿತಿ 21–45

ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ

ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಕೆ

ವಿಧವೆಯು ವಾಸ್ತವ್ಯವಿರುವ ಜಿಲ್ಲೆಯಲ್ಲೇ ಅರ್ಜಿ ಸಲ್ಲಿಕೆ

ಸುಳ್ಳು ದಾಖಲೆ ಸಲ್ಲಿಕೆ ಇಲ್ಲವೇ ಅಧಿಕಾರಿಗಳ ಪರಿಶೀಲನೆ ವೇಳೆ ಲೋಪ ಕಂಡು ಬಂದಲ್ಲಿ, ಅರ್ಜಿ ತಿರಸ್ಕೃತಗೊಳ್ಳುತ್ತದೆ
ಎಂ.ಬಿ.ಸಣ್ಣೇರ, ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.