ಲಕ್ಷ್ಮೇಶ್ವರ: ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತಮ ಲೀಡ್ ಸಿಗುವ ಭರವಸೆ ಇದೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಲಕ್ಷ್ಮೇಶ್ವರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕೊಡಗು ಮೈಸೂರಿಗೆ ಜಲಜೀವನ್ ಮಿಷನ್ ಮತ್ತು ಅಮೃತ ಯೋಜನೆಯಡಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದರು. ಕಳಸಾ-ಬಂಡೂರಿ, ಮೇಕೆದಾಟು, ಕಾವೇರಿ, ಭದ್ರಾ ಮೇಲ್ದಂಡೆ ಮತ್ತು ಆಲಮಟ್ಟಿ ಡ್ಯಾಂನ ಎತ್ತರವನ್ನು ಹೆಚ್ಚು ಮಾಡುವ ವಿಷಯ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಕುರಿತು ಆಳವಾದ ಜ್ಞಾನ ಹೊಂದಿದ್ದಾರೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ₹5,300 ಕೋಟಿ ಅನುದಾನ ತಂದಿದ್ದು ಬೊಮ್ಮಾಯಿ. ನನೆಗುದಿಗೆ ಬಿದ್ದಿದ್ದ ಕಳಸಾ-ಬಂಡೂರಿ ಕಾಮಗಾರಿ ಆರಂಭಗೊಳ್ಳಲು ಬೊಮ್ಮಾಯಿ ಅವರ ಪ್ರಯತ್ನವೇ ಕಾರಣ. ಬಸವರಾಜ ಬೊಮ್ಮಾಯಿ ಅವರು ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗುವುದು ಗ್ಯಾರಂಟಿ. ಈ ಬಾರಿ ಕ್ಷೇತ್ರದ ಮತದಾರರು ಕೇವಲ ಒಬ್ಬ ಸಂಸದರಿಗೆ ಮತ ನೀಡುತ್ತಿಲ್ಲ. ಬದಲಾಗಿ ಕೇಂದ್ರದಲ್ಲಿ ಮಂತ್ರಿ ಆಗುವವರಿಗೆ ಮತ ನೀಡುತ್ತಿದ್ದಾರೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆಗಾಗಿ ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದೆ. ವರದಿ ಬರಲಿ ನಿಜಾಂಶ ಎಲ್ಲರಿಗೂ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.

ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ಶಿವಪ್ರಕಾಶ ಮಹಾಜಶೆಟ್ಟರ, ಶಕ್ತಿ ಕತ್ತಿ, ನಿಂಗಪ್ಪ ಬನ್ನಿ, ಬಸವರಾಜ ಚಕ್ರಸಾಲಿ, ಗಿರೀಶ ಚೌರೆಡ್ಡಿ, ನವೀನ್ ಬೆಳ್ಳಟ್ಟಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.