ಡಂಬಳ: ಬೆಳೆ ಕಟಾವು ಮಾಡಿ ರಾಶಿ ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳುಹಿಸಲು ಸೂಕ್ತ ಕಣ ಇಲ್ಲವಾದ ಕಾರಣ ಇಲ್ಲಿಯ ಕೆಲವು ರೈತರು ತಾತ್ಕಾಲಿಕವಾಗಿ ಬಸ್ ನಿಲ್ದಾಣದ ಆವರಣವನ್ನೇ ಕಣವಾಗಿ ಮಾಡಿಕೊಂಡಿದ್ದಾರೆ.

‘ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷ ರೈತರು ಈ ತೊಂದರೆ ಎದುರಿಸುತ್ತಿದ್ದೇವೆ. ಸರ್ಕಾರ ಕಣ ನಿರ್ಮಾಣಕ್ಕೆ ಆದ್ಯತೆ ನೀಡಿ ಶಾಶ್ವತವಾಗಿ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮ ಪಂಚಾಯಿತಿ ಹೊಂದಿದ್ದು ಅಂದಾಜು 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಹುತೇಕ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ, ಕಬ್ಬು, ಬಿಳಿಜೋಳ, ಹತ್ತಿ, ಬಾಳೆ, ಪಪ್ಪಾಯಿ ಮುಂತಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಾರೆ.

‘ರೈತರು ಸ್ಥಳೀಯ ಸೊಸೈಟಿಯ ಆವರಣದಲ್ಲಿ ಬೆಳೆ ರಾಶಿ ಮಾಡುತ್ತಿದ್ದರು. ಈ ವರ್ಷ ಹೆಚ್ಚುವರಿ ಬೆಳೆಯನ್ನು ಬೆಳೆದಿದ್ದಾರೆ. ಜಾಗದ ಕೊರತೆ ಆಗಿರುವ ಕಾರಣ ತಾತ್ಕಾಲಿಕವಾಗಿ ಬಸ್ ನಿಲ್ದಾಣದ ಆವರಣವನ್ನೇ ಕಣವಾಗಿ ಮಾಡಿಕೊಂಡಿದ್ದಾರೆ. ನಾಲ್ಕೈದು ಎಕರೆ ರೈತರ ಭೂಮಿ ಖರೀದಿ ಮಾಡಿ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮಾಡಬೇಕಿದೆ’ ಎಂದು ರೈತ ಮುಖಂಡ ಉಮೇಶ ಅಂಕದ ಒತ್ತಾಯಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಪ್ರಮುಖ ಕಾರಣ: ‘ಹಿರೇವಡ್ಡಟ್ಟಿ ಗ್ರಾಮದ ಬಸ್ ನಿಲ್ದಾಣ ಸಂಪೂರ್ಣ ದುರಸ್ತಿಯಾಗಬೇಕಿದೆ. ಕಿಟಕಿ ಗಾಜುಗಳು ಒಡೆದಿವೆ. ಸಾಮೂಹಿಕ ಶೌಚಾಲಯ ಉಪಯೋಗಕ್ಕೆ ಬಾರದಂತಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಿ ನಿತ್ಯ ಪ್ರಯಾಣಿಕರು ರಸ್ತೆಯ ಬದಿಯಲ್ಲೇ ಬಸ್ಗಾಗಿ ಕಾಯ್ದು ನಿಲ್ಲುತ್ತಿದ್ದಾರೆ. ಸುಸಜ್ಜಿತ ಬಸ್ ನಿಲ್ದಾಣ ಇದ್ದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ’ ಎಂದು ಸಾರ್ವಜನಿಕರು, ವಿದ್ಯಾರ್ಥಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಆತಂಕದಲ್ಲಿ ರೈತರು: ‘ರೈತರು ಪ್ರತಿ ವರ್ಷ ಬೆಳೆ ಕಟಾವು ಮಾಡಿದ ನಂತರ ರಾಶಿ ಮಾಡಲು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಎರಡು ವಾರ ಕಳೆದರೆ ರಾಶಿ ಮಾಡುವುದು ಮುಗಿಯುತ್ತದೆ. ನಮ್ಮಲ್ಲಿ ರೈತರಿಗೆ ಪ್ರತ್ಯೇಕ ಜಾಗವಿಲ್ಲ. ಹಿಗಾಗಿ ಮಾನವೀಯ ನೆಲೆಯಲ್ಲಿ ರಾಶಿಯನ್ನು ತೆರವುಗೊಳಿಸಬಾರದು’ ಎಂದು ರೈತರು ಮನವಿ ಮಾಡಿದ್ದಾರೆ.

Highlights - null

Cut-off box - ಶೀಘ್ರದಲ್ಲೇ ಕಟ್ಟಡ ದುರಸ್ತಿ ಆರಂಭ ಸಾರಿಗೆ ನಿಯಂತ್ರಣಾಧಿಕಾರಿಗಳ ಕೊರತೆ ಇದೆ. ಬಸ್ ನಿಲ್ದಾಣ ದುರಸ್ತಿ ಮಾಡುವ ಕುರಿತು ಈಗಾಗಲೇ ಸ್ಥಳಕ್ಕೆ ಎಂಜಿನಿಯರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಶೀಘ್ರದಲ್ಲೇ ಕಟ್ಟಡ ದುರಸ್ತಿ ಕಾರ್ಯ ಆರಂಭವಾಗುತ್ತದೆ. ರೈತರು ಬಸ್ ನಿಲ್ದಾಣದ ಆವರಣದಲ್ಲಿ ಮೆಕ್ಕೆಜೋಳ ಈರುಳ್ಳಿ ಹಾಗೂ ಇತರ ಬೆಳೆ ಹಾಕಿ ಕಣ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಮುಂಡರಗಿ ಸಾರಿಗೆ ಘಟಕದ ವ್ಯವಸ್ಥಾಪಕ ಶೇಖರ ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.