ಮರಳಿಗಾಗಿ ನಿಯಮ ಮೀರಿ ಭೂಮಿ ಅಗೆತ: ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಸ್ಥಳೀಯರ ಕಿಡಿ
ನಿಂಗಪ್ಪ ಹಮ್ಮಿಗಿ
Published : 10 ಜೂನ್ 2024, 5:45 IST
Last Updated : 10 ಜೂನ್ 2024, 5:45 IST
ಫಾಲೋ ಮಾಡಿ
Comments
ಪಾಸ್ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಟ್ರ್ಯಾಕ್ಟರ್
ವೈಶಾಲಿ ಎಂ.ಎಲ್
ಸರ್ಕಾರದ ನಿಯಮ ಮೀರಿ ಮರಳು ತೆಗೆಯುವ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು
ವೈಶಾಲಿ ಎಂ.ಎಲ್. ಜಿಲ್ಲಾಧಿಕಾರಿ
ಬಿ.ಎಸ್.ನೇಮಗೌಡ
ಅಕ್ರಮವಾಗಿ ಮರಳು ಸಾಗಿಸುವ ಗಾಡಿಗಳ ಮಾಹಿತಿ ದೊರೆತರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು
ಬಿ.ಎಸ್. ನೇಮಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಂತೋಷ ಕುರಿ
ನಿಗದಿ ಮಾಡಿದ ಸ್ಥಳಗಳಲ್ಲಿ ಮರಳು ತುಂಬದೆ ಹಣದ ಆಸೆಗಾಗಿ ಅಕ್ರಮವಾಗಿ ಬೇರೆಡೆ ತುಂಬುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ
ಸಂತೋಷ ಕುರಿ ಎಐಸಿಸಿ ಮಾನವ ಹಕ್ಕುಗಳ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಕಾಶ ಕಲ್ಯಾಣಿ
ಮರಳಿಗಾಗಿ ಹಳ್ಳಗಳಲ್ಲಿ ತೆಗ್ಗು ತೋಡುತ್ತಿರುವುದರಿಂದ ಮಳೆಯ ನೀರು ರೈತರ ಜಮೀನಿಗೆ ನುಗ್ಗಿ ಮಣ್ಣು ಕೊಚ್ಚಿ ಹೋಗುತ್ತಿದೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಹೋರಾಟ ಕೈಗೊಳ್ಳಲಾಗುವುದು
ಪ್ರಕಾಶ ಕಲ್ಯಾಣಿ ಜಿಲ್ಲಾ ರೈತ ಸಂಘದ ಅಧ್ಯಕ್ಷ
ಮಾಫಿಯಾ ಬೃಹತ್ ಆಗಿ ಬೆಳೆದಿದ್ದು ಹೇಗೆ?
ಮರಳು ಮಾರಾಟ ಉದ್ಯಮದಲ್ಲಿ ಬಂಡವಾಳ ಕಡಿಮೆ; ಆದಾಯ ಅಧಿಕ. ಒಂದು ಲಾರಿ ಲೋಡ್ ಮರಳು ಪಾಸ್ ಇಲ್ಲದೆ ₹17 ಸಾವಿರದಿಂದ ₹20 ಸಾವಿರಕ್ಕೆ ಹಾಕಿರುತ್ತಾರೆ. ಪಾಸ್ ಇದ್ದರೆ ಸುಮಾರು ₹30 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಮರಳಿನ ಬೆಲೆ ದುಪ್ಪಟ್ಟಾಗಿರುತ್ತದೆ. ಪಾಸ್ ಇಲ್ಲದೇ ಹೆಚ್ಚು ವಾಹನಗಳಲ್ಲಿ ಮರಳು ಸಾಗಣೆ ನಡೆಯುತ್ತಿದೆ. ಪಾಯಿಂಟ್‌ನಲ್ಲಿ ಪಾಸ್ ಪಡೆದರೆ ಗುತ್ತಿಗೆ ಪಡೆದ ಸಂಸ್ಥೆಯು ರಾಜಧನದ ರೂಪದಲ್ಲಿ ನಿಗದಿತ ಮೊತ್ತವನ್ನು ಸರ್ಕಾರಕ್ಕೆ ಕಟ್ಟಬೇಕು. ಇಲ್ಲಿ ಅಕ್ರಮವು ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಯಾವುದೇ ರಾಜಧನವನ್ನು ಸರ್ಕಾರಕ್ಕೆ ಕಟ್ಟದೇ; ಅದನ್ನೇ ಸಂಬಂಧಪಟ್ಟ ಇಲಾಖೆಗಳಿಗೆ ತಿಂಗಳಿಗೆ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.