ನರಗುಂದ (ಗದಗ ಜಿಲ್ಲೆ): ಬಂಡಾಯದ ನೆಲ ನರಗುಂದದ ಮಹದಾಯಿ, ಕಳಸಾ ಬಂಡೂರಿ ಹೋರಾಟ ವೇದಿಕೆಯಲ್ಲಿ ಶುಕ್ರವಾರ ನಡೆದ ಬೃಹತ್ ರೈತ ಜಾಗೃತಿ ಸಮಾವೇಶದಲ್ಲಿ ರೈತ ಮುಖಂಡರು ಹಾಗೂ ಸ್ವಾಮೀಜಿಗಳು ರೈತ ವಿರೋಧಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಇಲ್ಲೀವರೆಗೆ ಆಳಿದ ಯಾವ ಸರ್ಕಾರಗಳೂ ರೈತರ ಉದ್ಧಾರಕ್ಕೆ ಶ್ರಮಿಸಿಲ್ಲ ಎಂದು ಗುಡುಗಿದರು.

‘ದೇಶದ ಆಡಳಿತವು ಹಣ, ಜಾತಿ ಲೆಕ್ಕಾಚಾರಗಳ ಸುಳಿಗೆ ಸಿಕ್ಕು ಹಾಳಾಗುತ್ತಿದೆ. ರಾಜಕಾರಣಿಗಳು, ಗುತ್ತಿಗೆದಾರರು ಶ್ರೀಮಂತರಾಗುತ್ತಿದ್ದಾರೆ. ರೈತರ ಉದ್ಧಾರ ಶೂನ್ಯವಾಗಿದೆ. ಇದು ಉತ್ತಮ ಬೆಳವಣಿಗೆ ಅಲ್ಲ’ ಎಂದು ಶಿರಹಟ್ಟಿ ಫಕೀರ ಸಿದ್ದರಾಮ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಕಿಡಿಕಾರಿದರು.

ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ‘ಮಹದಾಯಿ, ಕಳಸಾಬಂಡೂರಿ ಹೋರಾಟ ಯಶಸ್ವಿಯಾಗಿದ್ದು ರೈತರ ನಿರಂತರ ಪ್ರಯತ್ನಕ್ಕೆ ಸಿಕ್ಕ ಫಲ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸೋಬರದಮಠ ಅವರು, ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಬೇಕು, ಮಲಪ್ರಭಾ ನದಿ ಹೂಳೆತ್ತಬೇಕು, ನೀರಾವರಿ ಇಲಾಖೆಯ ಕಳಪೆ ಕಾಮಗಾರಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಉತ್ತರ ಕರ್ನಾಟಕದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು, ವಿದ್ಯುತ್ ಕನಿಷ್ಠ ದರ ವಸೂಲಿ ನಿಲ್ಲಿಸಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದದಿಂದ ತೆಗೆದುಕೊಂಡ ಸಾಲವನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಒಂದು ಬಾರಿ ಮನ್ನಾ ಮಾಡಬೇಕು, ಮಹದಾಯಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂಬ ಆರು ನಿರ್ಣಯಗಳನ್ನು ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.