ರೋಣ ಪಟ್ಟಣದ ಅಂಗಡಿಗಳಲ್ಲಿ ಬೃಹತ್ ಕಂಪನಿಗಳ ಕೃಷಿ ಸಲಕರಣೆಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ರೈತರು ಕಂಬಾರರಿಂದ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ. ಈ ಬೆಳವಣಿಗೆ ಕುಲಕಸುಬಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಸಾಳುಂಕೆ ಮನೆತನದವರ ಸಾಂಪ್ರದಾಯಿಕ ಕುಲುಮೆ
ಕುಲುಮೆಯಲ್ಲಿ ತಯಾರಿಸಿದ ಕೃಷಿ ಉಪಕರಣಗಳು
ಕುಲಮೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಕುಡ ಚೂರಿ ಮತ್ತು ಕೂರಿಗೆಗಳು
ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಕುಟುಂಬಗಳು ಸ್ವಂತ ಉದ್ಯೋಗ ತೊರೆದು ಆಳಾಗಿ ದುಡಿಯಲು ಹೊರಟ ಯುವಜನತೆ ರೋಣದ ಕುಂಬಾರಿಕೆ, ಕುಲುಮೆಗಳಲ್ಲಿ ಆವರಿಸಿದ ನೀರವತೆ
‘ಹನ್ನೆರಡಣೆ ಭಾಗ ನಮ್ಮಲ್ಲಿ ಗಿರಾಕಿ ಬರವಲ್ರು...’
‘ನಮ್ಮ ಅಪ್ಪನ ಕಾಲದಿಂದ ಇದೇ ಉದ್ಯೋಗ ಮಾಡಕತ್ತೀವ್ರಿ ಇಪ್ಪತ್ತು ವರ್ಷದ ಹಿಂದ ಕೆಲಸಾ ಸಾಕಷ್ಟಿರತ್ತಿತ್ತು ಈಗ ಅಂಗಡ್ಯಾಗ ಕಂಪನಿವು ಸಾಮಾನು ಬರಕತ್ತಿಂದ ಹನ್ನೆರಡಣೆ ಭಾಗ ನಮ್ಮಲ್ಲಿ ಗಿರಾಕಿ ಬರವಲ್ರು...’ ಎನ್ನುತ್ತಾರೆ ಕಂಬಾರಿಕೆ ವೃತ್ತಿನಿರತ ರೋಣ ನಿವಾಸಿ ತುಕಾರಾಂ ಸಾಳುಂಕೆ. ಇಂದಿಗೂ ತಂತ್ರಜ್ಞಾನ ಅಳವಡಿಸಿಕೊಳ್ಳದೆ ಸಾಂಪ್ರದಾಯಿಕ ಮಾದರಿಯ ಕುಲುಮೆಯಲ್ಲಿ ವೃತ್ತಿ ಮುಂದುವರಿಸಿದ್ದು ಕಚ್ಚಾ ಕಬ್ಬಿಣದ ಲಭ್ಯತೆಯ ಕೊರತೆ ಜೊತೆಗೆ ಕುಲುಮೆಗೆ ಬಳಸುವ ಇದ್ದಿಲು ಲಭ್ಯತೆ ಇಲ್ಲವಾಗಿದೆ. ಹತ್ತು ಕೆ.ಜಿ. ಇದ್ದಿಲಿಗೆ ₹50ರಿಂದ ₹60 ಬೆಲೆ ಇದ್ದು ವೃತ್ತಿಯ ನಷ್ಟಕ್ಕೆ ಕಾರಣವಾಗಿದೆ ಎಂಬುದು ಅವರ ಅಭಿಪ್ರಾಯ.