ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ| ಶಾಶ್ವತ ನೀರಾವರಿ ಯೋಜನೆ ಆದ್ಯತೆಯಾಗಲಿ: ನೂತನ ಶಾಸಕರ ಮುಂದೆ ಸಮಸ್ಯೆಗಳ ಸವಾಲು

Published : 22 ಮೇ 2023, 4:18 IST
Last Updated : 22 ಮೇ 2023, 4:18 IST
ಫಾಲೋ ಮಾಡಿ
Comments
ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ
ತಾಲ್ಲೂಕು ಕೇಂದ್ರವಾದರೂ ಇಲ್ಲಿ ಕೇವಲ ಬಿಎ, ಬಿಕಾಂ ಪದವಿ ಕಾಲೇಜುಗಳು ಮಾತ್ರ ಇವೆ. ಉನ್ನತ ಶಿಕ್ಷಣ ಪಡೆಯಬೇಕಾದರೆ ತಾಲ್ಲೂಕಿನ ವಿದ್ಯಾರ್ಥಿಗಳು ಎಂತಹ ಪರಿಸ್ಥಿತಿಯಲ್ಲೂ ಬೇರೆಡೆಗೆ ಹೋಗಬೇಕು. ಈ ತೊಂದರೆ ನಿವಾರಿಸಲು ನೂತನ ಶಾಸಕರು ಕ್ರಮ ಕೈಗೊಳ್ಳಬೇಕಿದೆ. ತಾಲ್ಲೂಕಿನಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ, ಡಿಪ್ಲೊಮಾ ಕಾಲೇಜುಗಳನ್ನು ಸ್ಥಾಪಿಸಬೇಕೆಂಬುದು ಪ್ರಜ್ಞಾವಂತರ ಬೇಡಿಕೆಯಾಗಿದೆ.
ಉದ್ಯೋಗ ಸೃಷ್ಟಿಗೆ ಒತ್ತು ನೀಡಿ
ಉದ್ಯೋಗ ಸೃಷ್ಟಿ ಮಾಡಿ ತಾಲ್ಲೂಕಿನ ನಿರುದ್ಯೋಗ ಯುವಕರಿಗೆ ಆಸರೆಯಾಗುವ ಗೋಜಿಗೆ ಇದುವರೆಗೂ ಯಾವ ಶಾಸಕರು ಹೋಗಿಲ್ಲ. ನೂತನ ಶಾಸಕರು ಈ ಭಾಗದಲ್ಲಿ ಉದ್ಯಮಗಳ ಸ್ಥಾಪನೆಗೆ ಕ್ರಮ ಕೈಗೊಂಡು, ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವ ಮೂಲಕ ನಿರುದ್ಯೋಗ ನಿವಾರಣೆ ಮಾಡಬೇಕು ಎಂಬುದು ಜನರ ಬಹುದೊಡ್ಡ ಬೇಡಿಕೆಯಾಗಿದೆ.
ಕಪ್ಪತಗುಡ್ಡ
ಕಪ್ಪತಗುಡ್ಡ
ಶಿರಹಟ್ಟಿ ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅವಶ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
- ಡಾ.ಚಂದ್ರು ಲಮಾಣಿ ಶಾಸಕರು
ರೈತರ ನೀರಾವರಿ ಬೇಡಿಕೆ ತಾಲ್ಲೂಕಿನ ಉದ್ದಕ್ಕೂ ಹರಿಯುತ್ತಿರುವ ತುಂಗಭದ್ರಾ ನದಿಯ ನೀರನ್ನು ಬಳಸಿ ಶಾಶ್ವತ ನೀರಾವರಿ ಯೋಜನೆಯನ್ನು ಇದುವರೆಗೂ ಯಾವ ಶಾಸಕರು ಕೈಗೊಂಡಿಲ್ಲ. ಸಾಸಲವಾಡ ಹೊಳೆ-ಇಟಗಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ವಯ ತಾಲ್ಲೂಕಿನ ರೈತರಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಶಾಸಕ ಡಾ.ಚಂದ್ರು ಲಮಾಣಿ ನೀಡಿದ್ದೆ ನಿಜವಾದರೆ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯಲಿದೆ ಎನ್ನುತ್ತಾರೆ ಕ್ಷೇತ್ರದ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT