ಚನ್ನರಾಯಪಟ್ಟಣ: ಪಟ್ಟಣದ ಸಿ.ಪಿ. ಪ್ರವೀಣ್ ನಿರ್ದೇಶನದ ಚೊಚ್ಚಲ ಕನ್ನಡ ಚಲನಚಿತ್ರ ‘ಎವಿಡೆನ್ಸ್’ ಮೇ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಸಿ.ಪಿ. ಪ್ರವೀಣ್ ತಿಳಿಸಿದರು.

ಕ್ರೈಮ್, ಥ್ರಿಲ್ಲರ್ ಜಾನ್‌ನೊಂದಿಗೆ ಸಾಗುವ ತ್ರಿಕೋನ ಪ್ರೇಮಕಥೆ ಇದಾಗಿದೆ. ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ ಚಲನಚಿತ್ರ ಇದಾಗಿದೆ. ಬೆಂಗಳೂರಿನ ಕೆ.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರ ಸೇರಿ ಮೈಸೂರು, ಹಾಸನ, ಚಿಕ್ಕಮಗಳೂರು, ರಾಮನಗರ ಮತ್ತು ಚನ್ನರಾಯಪಟ್ಟಣದ ಚಿತ್ರಮಂದಿರದಲ್ಲಿಯೂ ಬಿಡುಗಡೆಗೊಳಲಿದೆ. ಇಂಟರಾಗೇಶನ್ ಕೊಠಡಿಯಲ್ಲಿ ಸಾಕ್ಷ್ಯಾಧಾರದ ಸುತ್ತ ನಡೆಯುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪ್ರೇಮಕಥೆ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ. ಚಿಕ್ಕಮಗಳೂರು, ಮಂಗಳೂರು, ರಾಮನಗರ, ನೆಲಮಂಗಲ ಹಾಗೂ ಕಂಠೀರವ ಸ್ಟುಡಿಯೊದಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಿನಿಮಾ ನಿರ್ದೇಶನದ ಜೊತೆಗೆ ಚಿತ್ರಕ್ಕಾಗಿ ಎರಡು ಹಾಡುಗಳನ್ನು ತಾವೇ ಬರೆದಿದ್ದು, ನಿರ್ದೇಶಕರಾದ ಉಪೇಂದ್ರ, ದಿನೇಶ್‍ಬಾಬು ಅವರಲ್ಲಿ ಕೆಲಸ ಕಲಿತ ನಾನು ಅವರ ಛಾಯೆಯಲ್ಲಿಯೇ ಚಿತ್ರಕಥೆ ರಚಿಸಿದ್ದೇನೆ. ಇದುವರೆಗೆ 10 ಸಿನಿಮಾಗಳಿಗೆ ಹಾಡು ಬರೆದಿದ್ದೇನೆ ಎಂದ ಅವರು, ಚಿತ್ರವೂ ಶ್ರೀದೃತಿ ಪ್ರೊಡಕ್ಷನ್ ಲಾಂಛನದಲ್ಲಿ ಶ್ರೀನಿವಾಸಪ್ರಭು, ಕೆ. ಮಾದೇಶ್, ಸಿ.ಎಸ್. ನಟರಾಜ್ ನಿರ್ಮಾಣ ಮಾಡಿದ್ದು, ಅರವಿಂದ್ ಅಚ್ಚು, ಎಂ.ಎನ್. ರವೀಂದ್ರರಾವ್, ಸಿ.ಪಿ. ಪ್ರಶಾಂತ್, ಕೆ. ರಮೇಶ್, ಕಿಶೋರ್‍ಬಾಬು ಮತ್ತು ನರಸಿಂಹಮೂರ್ತಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದ ನಾಯಕರಾಗಿ ರೋಬೊ ಗಣೇಶ್ ಮತ್ತು ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 50ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ’ ಎಂದು ಮಾಹಿತಿ ನೀಡಿದ ಅವರು, ‘ಚಿತ್ರವೂ ತುಂಬ ಚೆನ್ನಾಗಿ ಮೂಡಿ ಬಂದಿದ್ದು, ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ನಮ್ಮನ್ನು ಹರಸಬೇಕು’ ಎಂದು ಮನವಿ ಮಾಡಿದರು.

ಪುರಸಭೆಯ ಮಾಜಿ ಸದಸ್ಯ ರಘು ಮಾತನಾಡಿ, ‘ಚನ್ನರಾಯಪಟ್ಟಣದ ಕೋಟೆ ಬಡಾವಣೆಯಲ್ಲಿ ಬೆಳೆದ ಹುಡುಗ ಪ್ರವೀಣ್ ಕಾರ್ಯಕ್ಕೆ ಬೆನ್ನುತಟ್ಟುವ ಕೆಲಸ ನಮ್ಮಿಂದಾಗಬೇಕು. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ಚಿತ್ರರಂಗದ ಹಿನ್ನಲೆಗಾಯಕಿ ಸಿ.ಎಸ್. ನಂದಿತಾ, ಹಾಸ್ಯ ಕಲಾವಿದ ಕೋಟೆ ನಾಗರಾಜು ಚನ್ನರಾಯಪಟ್ಟಣದವರು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ಪ್ರದೀಪ್, ಅರವಿಂದ್‍ಕುಮಾರ್, ಕೆ.ರಮೇಶ್, ಕಲಾವಿದರಾದ ಆರಾಧ್ಯ ಶಿವಕುಮಾರ್, ಪ್ರವೀಣ್ ಸಹೋದರ ಮುರಳಿಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.