ಕೂಲಿ ವೆಚ್ಚ ಸಿಗುವುದು ಕಷ್ಟಕರ
‘ಈ ಬಾರಿ ಬಿತ್ತನೆ ಶುಂಠಿ ಬೆಲೆ 60ಕೆ.ಜಿ.ಗೆ ₹5500ರಿಂದ ₹6500 ವರೆಗೆ ಇತ್ತು. ಜೊತೆಗೆ ಕೂಲಿ ಪೈಪ್‌ಲೈನ್ ಕೋಳಿಗೊಬ್ಬರ ರಾಸಾಯನಿಕಗಳ ದರಗಳಲ್ಲೂ ಗಣನೀಯವಾಗಿ ಏರಿಕೆಯಾಗಿದೆ. 1 ಎಕರೆಯಲ್ಲಿ ಶುಂಠಿ ಬೆಳೆಯಲು ಈ ವರ್ಷ ₹5.5ಲಕ್ಷದಿಂದ ₹6 ಲಕ್ಷ ವೆಚ್ಚವಾಗಿದೆ’ ಎಂದು ರೈತರು ವಿವರಿಸುತ್ತಾರೆ. ಈಗಿನ ಬೆಲೆಯಲ್ಲಿ ಒಂದು ಎಕರೆಯಲ್ಲಿ ಬೆಳೆದ ಶುಂಠಿ ಮಾರಾಟ ಮಾಡಿದರೆ ₹2 ಲಕ್ಷದಿಂದ ₹2.5 ಲಕ್ಷ ಸಿಗುತ್ತಿದೆ. ಬೆಳೆಗಾರರು ಈಗಾಗಲೇ ಎಕರೆಗೆ ₹5 ಲಕ್ಷಕ್ಕೂ ಖರ್ಚು ಮಾಡಿದ್ದು ಮಾಡಿದ್ದ ಖರ್ಚಿನ ಅರ್ಧದಷ್ಟು ಮಾತ್ರ ಆದಾಯ ಸಿಗುವಂತಾಗಿದೆ ಎಂದು ಹೇಳುತ್ತಾರೆ.