ಹಾಸನ: ಮೊದಲ ಬಾರಿಗೆ ಜಿಲ್ಲೆಯ ಐವರು ಕ್ರೀಡಾಪಟುಗಳು ಸೀನಿಯರ್ ಮತ್ತು ಜೂನಿಯರ್ ಹಾಕಿ ವಿಭಾಗದ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ನಗರದ ಬೀರನಹಳ್ಳಿ ಬಡಾವಣೆ ರಾಘವೇಂದ್ರ ಕಾಲೋನಿಯ ಮಹೇಶ್-ಕಮಲ ದಂಪತಿಪುತ್ರ ಬಿ.ಎಂ. ಶೇಷೇಗೌಡ, ಹಿರಿಯ ಪುರುಷರ ತಂಡಕ್ಕೆಹಾಗೂ ಹೊಳೆನರಸೀಪುರತಾಲ್ಲೂಕು ಆಲದಹಳ್ಳಿ ಗ್ರಾಮದ ರಾಮಚಂದ್ರ ಅವರ ಪುತ್ರಿ ಅಂಜಲಿ ಎಚ್.ಆರ್.ಮಹಿಳಾ ತಂಡದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಇಬ್ಬರು ಶಿಬಿರದಲ್ಲಿ ಭಾಗಿಯಾಗಿದ್ದಾರೆ.

ಮಿಡ್ ಫೀಲ್ಡರ್ ಆಟಗಾರ ಆಗಿರುವ ಶೇಷೇಗೌಡ ಅವರು ಪ್ರಸ್ತುತ ಇಂಡಿಯನ್ ರೈಲ್ವೆಹೈದ್ರಾಬಾದ್ನಲ್ಲಿ ಉದ್ಯೋಗಿಯಾಗಿದ್ದು, ದೇಶದ ವಿವಿಧೆಡೆ ನಡೆದಿರುವ ಹಲವುಕ್ರೀಡಾಕೂಟದಲ್ಲಿ ಭಾಗಿಯಾಗಿ ಬಹುಮಾನ ಗಳಿಸಿದ್ದಾರೆ.
ಮುನ್ನಡೆ ಆಟಗಾರ್ತಿ ಅಂಜಲಿ ಅವರು ಮೈಸೂರಿನ ಚಾಮುಂಡಿ ವಿವಾಹ ಕ್ರೀಡಾಂಗಣದ ಮಹಿಳಾ ಕ್ರೀಡಾ ಹಾಸ್ಟೆಲ್ನಲ್ಲಿ ತರಬೇತಿ ಪಡೆದಿದ್ದಾರೆ.

ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಡಿ (ಟಾಪ್) ಮಹಿಳಾ ಜೂನಿಯರ್ ಹಾಕಿ ತರಬೇತಿಗೆ ನಗರದ ಕ್ರೀಡಾ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅರಕಲಗೂಡು ತಾಲ್ಲೂಕು ಗಂಗೂರು ಗ್ರಾಮದ ಜಗದೀಶ್-ಸುಜಾತ ದಂಪತಿ ಪುತ್ರಿ ಚಂದನಾ ಜೆ., ಶಾಂತಿಗ್ರಾಮದಪ್ರಕಾಶ-ಸೌಭಾಗ್ಯಮ್ಮ ದಂಪತಿ ಪುತ್ರಿ ಲಿಖಿತಾ ಎಸ್.ಪಿ. ಹಾಗೂ ಮಳಲಿ ಗ್ರಾಮದನಾಗರಾಜ್ ಪುತ್ರಿ ತೇಜಸ್ವಿನಿ ಡಿ.ಎನ್. ಆಯ್ಕೆಯಾಗಿದ್ದಾರೆ.

ಇವರೆಲ್ಲರೂ ರಾಜ್ಯದ 19 ವರ್ಷದೊಳಗಿನವರ ತಂಡದ ಆಟಗಾರ್ತಿಯರು.ಬೆಂಗಳೂರಿನಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿಯು ಜ.17ರಿಂದ 29ರವರೆಗೆ ನಡೆಯಲಿದೆ. ಆಯ್ಕೆಯಾದವರು ಹಾಕಿ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಜೂನಿಯರ್ ಟೂರ್ನಿಯಲ್ಲಿ ಆಡಿದ್ದರು. ದೇಶದ ಒಟ್ಟು 60 ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದ್ದು, ಇವರ ಪೈಕಿ 33 ಮಂದಿಯನ್ನು ಆರಿಸಿ ವಿಶೇಷ ತರಬೇತಿ ನೀಡಲಾಗುತ್ತದೆ.

ಅರೆ ಮಲೆನಾಡು ಖ್ಯಾತಿಯ ಹಾಸನ ಜಿಲ್ಲೆ ಈಗಾಗಲೇ ಅಂತರರಾಷ್ಟ್ರೀಯ ಕ್ರೀಡೆಗಳಿಗೆ ಹಲವು ಕ್ರೀಡಾಪಟುಗಳನ್ನು ನೀಡಿದೆ. ಪ್ರಮುಖರು ಜಾವಗಲ್ ಶ್ರೀನಾಥ್ (ಕ್ರಿಕೆಟ್),ವಿಕಾಸ್ಗೌಡ (ಡಿಸ್ಕಸ್ ಥ್ರೋ), ಪ್ಯಾರಾ ಒಲಿಂಪಿಯನ್ ಹೊಸನಗರ ಗಿರೀಶ್( ಹೈಜಂಪ್), ಇತ್ತೀಚೆಗೆ ಸುಹಾಸ್ ಲಾಳನಕೆರೆ( ಬ್ಯಾಡ್ಮಿಂಟನ್) ಅವರು ಅವಿಸ್ಮರಣೀಯ ಸಾಧನೆ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.